ಟಿಎಚ್ಒ ನಾಗೇಂದ್ರ ಆತ್ಮಹತ್ಯೆ ಕೇಸ್: ವಾರದೊಳಗೆ ತನಿಖಾ ವರದಿ ನೀಡುವಂತೆ ಸೂಚನೆ ಮೈಸೂರು, ಆಗಸ್ಟ್, 25, 2020(..); ನಂಜನಗೂಡು ಟಿಎಚ್ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ತನಿಖಾ ವರದಿ ನೀಡುವಂತೆ ಸರಕಾರ ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಗೆ ಸೂಚನೆ ನೀಡಿದೆ. ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಅವರು ನಾಗೇಂದ್ರ ಆತ್ಮಹತ್ಯೆ ಸಂಬಂಧಿಸಿದಂತೆ ತನಿಖಾ ಆದೇಶ ಸ್ವೀಕರಿಸಿ, ನೆನ್ನೆಯಿಂದ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ನಿನ್ನೆ ಮಾತನಾಡಿದ್ದ ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್, ತನಿಖೆಗೆ ಆದೇಶ ಬಂದರೇ ಒಂದು ವಾರದೊಳಗೆ ತನಿಖೆ ಸಂಪೂರ್ಣಗೊಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿದ್ದರು. ; --’-------