ಫಾರ್ಮ್‌ ಹೌಸ್‌ನಲ್ಲಿ ಹೊಸ ಮನೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ನಿಖಿಲ್-ರೇವತಿ ಬೆಂಗಳೂರು, ಆಗಸ್ಟ್ 24, 2020 (..):ನಿಖಿಲ್ ಕುಮಾರಸ್ವಾಮಿ ತಮ್ಮ ಫಾರ್ಮ್‌ ಹೌಸ್‌ನಲ್ಲೇ ಒಂದು ಸುಂದರವಾದ ಮನೆ ಕಟ್ಟುವ ತೀರ್ಮಾನ ಮಾಡಿದ್ದಾರೆ. ಇತ್ತೀಚಿಗೆ ದಂಪತಿ ಜೊತೆಸೇರಿ ಭೂಮಿ ಪೂಜೆ ಮಾಡಿದ್ದಾರೆ. ಬಿಡದಿ ಬಳಿ ಇರುವ ಇವರ ಫಾರ್ಮ್ ಹೌಸ್ ನಲ್ಲಿ ಗೌರಿ-ಗಣೇಶ ಹಬ್ಬದ ಶುಭ ದಿನದಂದೇ ಈ ಕಾರ್ಯ ನಡೆದಿದೆ.‌ ಪರಿಸರ ಸ್ನೇಹಿ ಮನೆ ಕಟ್ಟಿಕೊಳ್ಳುವ ಯೋಚನೆಯಲ್ಲಿ ಇದ್ದಾರೆ ನಿಖಿಲ್. ನಿಖಿಲ್‌-ರೇವತಿ ಭೂಮಿ ಪೂಜೆ ಮಾಡುತ್ತಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.