ಮತ್ತೆ ಶುರುವಾಗುತ್ತಿದೆ ಕೌನ್​ ಬನೇಗಾ ಕರೋಡ್ಪತಿ ಬೆಂಗಳೂರು, ಆಗಸ್ಟ್ 24, 2020 (..):ಕೌನ್​ ಬನೇಗಾ ಕರೋಡ್ಪತಿ ಮತ್ತೆ ಶುರುವಾಗುತ್ತಿದೆ. ಹೌದು. ಈಗ ಕೌನ್​ ಬನೇಗಾ ಕರೋಡ್ಪತಿ ಪ್ರೋಮೋ ಶೂಟ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಮಿತಾಭ್. ಶೀಘ್ರದಲ್ಲೇ ಕೌನ್​ ಬನೇಗಾ ಕರೋಡ್ಪತಿ 12 ಪ್ರಾರಂಭವಾಗಲಿದೆ. ಈ ಬಗ್ಗೆ ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಈ ಸುದ್ದಿ ಕೇಳಿ ಸಕ್ಕತ್ ಖುಷಿ ಮತ್ತು ಕಾತೂರರಾಗಿದ್ದಾರೆ. ಈ ಬಾರಿ ಕೌನ್​ ಬನೇಗಾ ಕರೋಡ್ಪತಿ ಸ್ಪರ್ಧಾಳುಗಳನ್ನು ಆನ್​ಲೈನ್​ ಮೂಲಕವೇ ಆಯ್ಕೆ ಮಾಡಲಾಗಿದೆಯಂತೆ. . ಕೊರೊನಾ ಮುಂಜಾಗ್ರತಾ ನಿಯಮಾವಳಿ ಪ್ರಕಾರ ಪ್ರೋಮೊ ಶೂಟ್ ನಡೆಯುತ್ತಿದೆ.