ಚುನಾವಣೆ ಬಹಳ ದೂರವಿದೆ ಎಂಬ ತಾತ್ಸಾರ ಬೇಡ : ಬಿ.ಎಲ್.ಸಂತೋಷ ಸೂಚನೆ ಬೆಂಗಳೂರು, ಆಗಸ್ಟ್, 23, 2020(..) ;ಚುನಾವಣೆ ಬಹಳ ದೂರವಿದೆ ಎಂಬ ತಾತ್ಸಾರ ಬೇಡ. ಪಕ್ಷ ಸಂಘಟನೆಗೆ ಒತ್ತು ಕೊಡಿ. ಇಂದಿನಿಂದಲೇ ಸಂಘಟನೆ ಚುರುಕುಗೊಳಿಸಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೂಚಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯುವ ಮೋರ್ಚಾ ಮತ್ತು ಎಸ್ಸಿ ಮೋರ್ಚಾ ಅಧ್ಯಕ್ಷರ ಜೊತೆಗೆ ಪಕ್ಷ ಸಂಘಟನೆ ಸಂಬಂಧ ನಡೆದ ಸಭೆಯಲ್ಲಿ ಈ ಕುರಿತು ಸೂಚನೆ ನೀಡಿದರು. ಮೋರ್ಚಾ ಅಧ್ಯಕ್ಷರು ಸಕ್ರೀಯರಾಗಿ ; ಪಕ್ಷದ ಅಧ್ಯಕ್ಷರಷ್ಟೇ ರಾಜ್ಯಾದ್ಯಂತ ಪ್ರವಾಸ ಮಾಡಿದರೆ ಸಾಲದು, ಉಪಾಧ್ಯಕ್ಷರು ಮತ್ತು ಎಲ್ಲ ಮೋರ್ಚಾ ಅಧ್ಯಕ್ಷರು ಸಕ್ರೀಯರಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ. ಕೊರೊನಾ ನಿಯಂತ್ರಣದಲ್ಲಿ ಸರಕಾರ ಸಫಲವಾಗಿದೆ. ಈ ಎಲ್ಲ ವಿಚಾರಗಳನ್ನು ಇಟ್ಕೊಂಡು ರಾಜ್ಯ ಸುತ್ತುವ ಮೂಲಕ ಪಕ್ಷ ಸಂಘಟನೆ ಮಾಡಿ ಎಂದು ಸಲಹೆ ನೀಡಿದ್ದಾರೆ. :’----: ..-