ಸೋನಿಯಾ ಬಿಟ್ಟರೆ ರಾಹುಲ್ ಅಧ್ಯಕ್ಷರಾಗಲಿ : ಮಲ್ಲಿಕಾರ್ಜುನ ಖರ್ಗೆ ಮನವಿ ಬೆಂಗಳೂರು, ಆಗಸ್ಟ, 24, 20209www..); ದೇಶ, ಪಕ್ಷದ ಅಭಿವೃದ್ಧಿಗೆ ಗಾಂಧಿ ಕುಟುಂಬದ ಕೊಡುಗೆ ಅಪಾರವಾಗಿದ್ದು, ಸೋನಿಯಾ ಬಿಟ್ಟರೆ ರಾಹುಲ್ ಅಧ್ಯಕ್ಷರಾಗಲಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಗಾಂಧಿ ಕುಟುಂಬದ ತ್ಯಾಗ, ಬಲಿದಾನ ಮರೆಯಬಾರದು. ದೇಶದಲ್ಲಿ ಸಮಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ. ಬಲಿಷ್ಠ ಪ್ರಜಾಪ್ರಭುತ್ವದ ಅನುಷ್ಠಾನಕ್ಕೆ ಅವರು ಕಾರಣರಾಗಿದ್ದಾರೆ. ಹೀಗಾಗಿ, ಇಡೀ ಪಕ್ಷ ಸೋನಿಯಾ ಪರ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ನಾಯಕರು ನಿಷ್ಠೆ ತೋರಬೇಕು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸೋನಿಯಾ ಶ್ರಮ ಮಹತ್ವದಾಗಿದ್ದು, ಇದನ್ನು ಯಾರು ಮರೆಯಬಾರದು ಎಂದು ತಿಳಿಸಿದ್ದಾರೆ. : -----