ನಮಗೆ ಸಚಿವ ಸ್ಥಾನ ಕೊಟ್ಟರೇ ಮತ್ತಷ್ಟು ಕೆಲಸ ಮಾಡ್ತೇವೆ- ಬಿಜೆಪಿ ಶಾಸಕ… ಬೆಂಗಳೂರು,ಆ,24,2020(..): ಕೊರೋನಾ ಮಹಾಮಾರಿ ಕಂಟಕದ ನಡುವೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಗೆ ಬಂದಿದ್ದು ಸಿಎಂ ಬಿಎಸ್ ವೈ ಕ್ಯಾಬಿನೆಟ್ ಗೆ ಸೇರ್ಪಡೆಯಾಗಲು ಹಲವು ಬಿಜೆಪಿ ಶಾಸಕರು ಲಾಬಿ ನಡೆಸಲು ಮುಂದಾಗಿದ್ದಾರೆ. ಈ ನಡುವೆ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ಶಾಸಕ ಹಾಲಪ್ಪ ಆಚಾರ್ ಕೂಡ ಇದ್ದಾರೆ. ಮಂತ್ರಿಗಿರಿ ಬಗ್ಗೆ ಇಂದು ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಹಾಲಪ್ಪ ಆಚಾರ, ಸಚಿವ ಸ್ಥಾನಕ್ಕಾಗಿ ನಾನು ಎಲ್ಲೂ ಹೋಗಿಲ್ಲ. ಊರಲ್ಲೇ ಇದ್ದು ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಮೂರು ಜನ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ನಮಗೆ ಸಚಿವ ಸ್ಥಾನ ಕೊಟ್ಟರೇ ಮತ್ತಷ್ಟು ಕೆಲಸ ಮಾಡುತ್ತೇವೆ ಎಂದರು. ಹಾಗೆಯೇ ಜಿಲ್ಲೆಯ ಮೂವರು ಬಿಜೆಪಿ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ ಎಂದು ಹಾಲಪ್ಪ ಆಚಾರ್ ತಿಳಿಸಿದ್ದಾರೆ. : - – - --