ಟಿಹೆಚ್ಒ ಆತ್ಮಹತ್ಯೆ ಪ್ರಕರಣ: ಫಾನಾ ಸದಸ್ಯರಿಂದ ಅ. 23 ರಂದು ಕ್ಯಾಂಡಲ್ ‌ಲೈಟ್ ಪ್ರತಿಭಟನೆ.. ಬೆಂಗಳೂರು,ಆ,21,2020(..):ವೈದ್ಯಕೀಯ ಬ್ರಾತೃತ್ವದ ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ಡಾ. ನಾಗೇಂದ್ರ,ನಂಜನಗೂಡು ಅವರ ಅಗಲಿದ ಆತ್ಮಕ್ಕಾಗಿ ಪ್ರಾರ್ಥಿಸಿ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ )-ಕೆಎಸ್‌ಬಿ ನೀಡಿದ ಕರೆಗೆ ಬೆಂಬಲವಾಗಿ ಎಲ್ಲಾ ಫಾನಾ ಸದಸ್ಯರು ಆಗಸ್ಟ್ 23 ರ ಭಾನುವಾರ ರಾತ್ರಿ 8.00 ಕ್ಕೆ, ಕ್ಯಾಂಡಲ್‌ಲೈಟ್ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಸಮಾಜದ ಯೋಗಕ್ಷೇಮಕ್ಕಾಗಿ ಹಾಗೂ ಕೊರೋನಾ ಹೆಮ್ಮಾರಿಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ ಹೆಲ್ತ್‌ಕೇರ್ ಸಿಬ್ಬಂದಿ ಮತ್ತು ಕೋವಿಡ್ ಯೋಧರ ಸ್ಮರಣಾರ್ಥ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ )-ಕೆಎಸ್‌ಬಿ ನೀಡಿದ ಕರೆಗೆ ಬೆಂಬಲವಾಗಿ ಎಲ್ಲಾ ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘ)ದ ಸದಸ್ಯರು, ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಆಗಸ್ಟ್ 21 ಮತ್ತು 22 ರಂದು ನಾವೆಲ್ಲರೂ ಕಪ್ಪು ಬ್ಯಾಡ್ಜ್ / ರಿಬ್ಬನ್ ಧರಿಸಿ ಆಗಸ್ಟ್ 23 ರ ಭಾನುವಾರ ರಾತ್ರಿ 8.00 ಕ್ಕೆ, ಕ್ಯಾಂಡಲ್‌ ಲೈಟ್ ಪ್ರತಿಭಟನೆಯನ್ನ ಆಯೋಜಿಸಿದೆ. ಆರೋಗ್ಯ ಸಿಬ್ಬಂದಿಯ ಸಮಸ್ಯೆಗಳು ಮತ್ತು ಒತ್ತಡಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮತ್ತು ಅಧಿಕಾರಶಾಹಿ ಆಡಳಿತವನ್ನು ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘ) ಖಂಡಿಸುವುದಾಗಿ ತಿಳಿಸಿದೆ. : - - - - - - 23rd.