ಸಿಇಟಿ ಫಲಿತಾಂಶ ಪ್ರಕಟ: ಅಕ್ಟೋಬರ್ ನಲ್ಲಿ ಕೌನ್ಸಿಲಿಂಗ್: ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ ನೋಡಿ… ಬೆಂಗಳೂರು,ಆ,21,2020(..): ಮಹಾಮಾರಿ ಕೋವಿಡ್-19 ನಡುವೆಯೂ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬೆಂಗಳೂರಿನಲ್ಲಿ ಗುರುವಾರ ಪ್ರಕಟಿಸಿದರು. ಎಂಜಿನಿಯರಿಂಗ್, ಪಶುವೈದ್ಯಕೀಯ, ಬಿಎಸ್ಸಿ (ಕೃಷಿ), ಬಿ- ಫಾರ್ಮಾ, ಡಿ-ಪಾರ್ಮಾ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗಿತ್ತು. ವರಮಹಾಲಕ್ಷ್ಮಿ ಹಬ್ಬದಂದು ಪರೀಕ್ಷೆ ನಡೆಸಿದ್ದ ಕೆಇಎ, ಗೌರಿ ಹಬ್ಬದಂದು ಫಲಿತಾಂಶ ಪ್ರಕಟಿಸಿದೆ. ದಾಖಲೆಯ 20 ದಿನಗಳಲ್ಲೇ ಫಲಿತಾಂಶ ಕೊಟ್ಟಿರುವುದು ಕೆಇಎನ ಹೆಗ್ಗಳಿಕೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ದೇಶಕ್ಕೆ ಸಿಇಟಿಯನ್ನು ಕೊಟ್ಟು ಉನ್ನತ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ ಕರ್ನಾಟಕದಲ್ಲಿ ಈ ವರ್ಷ ಕೋವಿಡ್ ಕಾರಣಕ್ಕೆ ಪರೀಕ್ಷೆ ನಡೆಸುವುದೇ ಕಷ್ಟವೆನ್ನುವ ಪರಿಸ್ಥಿತಿ ತಲೆದೋರಿತ್ತು. ಆದರೆ, ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯಿಂದ ಪರೀಕ್ಷೆಯನ್ನು ನಡೆಸಲಾಯಿತಲ್ಲದೆ, ಕೋವಿಡ್ ಪಾಸಿಟೀವ್ ಇದ್ದ 63 ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಸಿಇಟಿ ಇತಿಹಾಸದಲ್ಲಿ ಮೈಲುಗಲ್ಲಾಗಿ ಉಳಿಯಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು. ರ್ಯಾಂಕ್ ಪಡೆದವರ ಪಟ್ಟಿ…. ಎಂಜಿನಿಯರಿಂಗ್: 1.ಎಂ. ರಕ್ಷಿತ್: ಬೆಂಗಳೂರಿನ ಆರ್.ವಿ. ಪಿಯು ಕಾಲೇಜು 2.ಆರ್. ಶುಭನ್: ಬೆಂಗಳೂರಿನ ಶ್ರೀ ಚೈತನ್ಯ ಇ ಟೆಕ್ನೋ ಕಾಲೇಜು 3.ಎಂ.ಶಶಾಂಕ್ ಬಾಲಾಜಿ: ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜು 4.ಪಿ. ಶಶಾಂಕ್: ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು 5.ಸಂದೀಪನ್ ನಸ್ಕರ್: ಹೊರನಾಡ ಕನ್ನಡಿಗ ವಿದ್ಯಾರ್ಥಿ ಬಿಎಸ್ಸಿ ಅಗ್ರಿ: 1.ವರುಣ್ ಗೌಡ ಎ.ಬಿ.: ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು 2.ಕೆ. ಸಂಜನಾ: ಮೈಸೂರು ಬೇಸ್ ಕಾಲೇಜು 3.ಲೋಕೇಶ್ ಬಿ. ಜೋಗಿ: ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲ ಪಿಯು ಕಾಲೇಜು 4.ಪಿ.ಪಿ. ಅರನವ್ ಅಯ್ಯಪ್ಪ: ಮೂಡಬಿದಿರೆಯ ಆಳ್ವಾಸ್ ಕಾಲೇಜು 5.ಪ್ರಜ್ವಲ್ ಕಶ್ಯಪ್: ಬೆಂಗಳೂರಿನ ವಿದ್ಯಾಮಂದಿರ ಪಿಯು ಕಾಲೇಜು ಪಶುವೈದ್ಯ ವಿಜ್ಞಾನ: 1.ಪಿ. ಸಾಯಿ ವಿವೇಕ್: ಬೆಂಗಳೂರಿನ ನಾರಾಯಣ ಇ- ಟೆಕ್ನೋ ಶಾಲೆ 2.ಆರ್ಯನ್ ಮಹಾಲಿಂಗಪ್ಪ ಚನ್ನಲ್: ಕೋಟಾದ ಪ್ರಗತಿ ಪಬ್ಲಿಕ್ ಶಾಲೆ 3.ಕೆ. ಸಂಜನಾ: ಮೈಸೂರಿನ ಬೇಸ್ ಕಾಲೇಜು 4.ಪವನ್ ಎಸ್. ಗೌಡ: ಬೆಂಗಳೂರು ನಾರಾಯಣ ಪಿಯು ಕಾಲೇಜು 5.ಪಿ.ಪಿ. ಅರ್ನವ್ ಅಯ್ಯಪ್ಪ : ಮೂಡಬಿದಿರೆಯ ಆಳ್ವಾಸ್ ಕಾಲೇಜು ಬಿ ಫಾರ್ಮಾ ಮತ್ತು ಡಿ ಫಾರ್ಮಾ: 1.ಪಿ. ಸಾಯಿ ವಿವೇಕ್: ಬೆಂಗಳೂರಿನ ನಾರಾಯಣ ಇ- ಟೆಕ್ನೋ ಶಾಲೆ 2.ಸಂದೀಪನ್ ನಸ್ಕರ್: ಹೊರನಾಡ ಕನ್ನಡಿಗ ವಿದ್ಯಾರ್ಥಿ 3.ಪವನ್ ಎಸ್. ಗೌಡ : ಬೆಂಗಳೂರು ನಾರಾಯಣ ಪಿಯು ಕಾಲೇಜು 4.ಆರ್ಯನ್ ಮಹಾಲಿಂಗಪ್ಪ ಚನ್ನಲ್: ಕೋಟಾದ ಪ್ರಗತಿ ಪಬ್ಲಿಕ್ ಶಾಲೆ 5.ಕೆ. ಸಂಜನಾ: ಮೈಸೂರಿನ ಬೇಸ್ ಕಾಲೇಜು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ: 1.ಪಿ.ಪಿ. ಅರನವ್ ಅಯ್ಯಪ್ಪ: ಮೂಡಬಿದಿರೆಯ ಆಳ್ವಾಸ್ ಕಾಲೇಜು 2.ಕೆ. ಸಂಜನಾ: ಮೈಸೂರಿನ ಬೇಸ್ ಕಾಲೇಜು 3.ಪಿ. ಸಾಯಿ ವಿವೇಕ್: ಬೆಂಗಳೂರಿನ ನಾರಾಯಣ ಇ- ಟೆಕ್ನೋ ಶಾಲೆ 4.ಕಾರ್ತಿಕ್ ರೆಡ್ಡಿ: ಬೀದರಿನ ಶಾಹಿನ್ ಐಎನ್’ಡಿಪಿ ಕಾಲೇಜು 5.ವರುಣ್ ಗೌಡ ಎ.ಬಿ.: ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು ವೆಬ್’ಸೈಟಿನಲ್ಲಿ ಫಲಿತಾಂಶ: ಸಾಮಾನ್ಯ ಪ್ರವೇಶ ಪರೀಕ್ಷೆ () ಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್​ಸೈಟ್​ .../ ದಲ್ಲಿ ನೋಡಿ, ಡೌನ್’ಲೋಡ್ ಮಾಡಿಕೊಳ್ಳಬಹುದಾಗಿದೆ. ಫಲಿತಾಂಶ ನೋಡಲು ಕೆಳಗಿನ ಲಿಂಕ್’ಗಳನ್ನು ಕ್ಲಿಕ್​ ಮಾಡಬಹುದು. ..., ..., .., .. ಉತ್ತಮ ಪ್ರತಿಕ್ರಿಯೆ… ಕೋವಿಡ್’ನಿಂದ ಎಷ್ಟೇ ಸಮಸ್ಯೆ ಎದುರಾದರೂ ಸರಕಾರ ಪರೀಕ್ಷೆ ನಡೆಸಿತು. ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆ ಆಗಬಾರದು ಎಂಬುದು ಸರಕಾರದ ಅಚಲ ನಂಬಿಕೆಯಾಗಿತ್ತು. ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಎಲ್ಲ ಇಲಾಖೆಗಳ ಸಹಕಾರದಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಎಂಜಿನಿಯರಿಂಗ್ ಕೋರ್ಸ್’ಗೆ 1,94,419 ವಿದ್ಯಾರ್ಥಿಗಳು, ಅರ್ಜಿ ಸಲ್ಲಿಸಿದ್ದರೆ, ಆ ಪೈಕಿ 1,75,349 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಇವರಲ್ಲಿ 1,53,470 ವಿದ್ಯಾರ್ಥಿಗಳಿಗೆ ರಾಂಕ್‌ ನೀಡಲಾಗಿದೆ. ಬಿಎಸ್ಸಿ ಅಗ್ರಿ ವಿಭಾಗದಲ್ಲೂ 1,27,627, ಪಶುವೈದ್ಯ ವಿಜ್ಞಾನ ವಿಭಾಗದಲ್ಲಿ 1,29,666, ಬಿ-ಫಾರ್ಮಾ, ಡಿ-ಫಾರ್ಮಾ ವಿಭಾಗದಲ್ಲಿ 1,55,552 ವಿದ್ಯಾರ್ಥಿಗಳು ರಾಂಕ್ ಪಡೆದಿದ್ದಾರೆ. ಅಕ್ಟೋಬರ್‌ನಲ್ಲಿ ಕೌನ್ಸೆಲಿಂಗ್… ಜೆಇಇ, ನೀಟ್ ಮುಂತಾದ ಪರೀಕ್ಷೆಗಳ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಬಹುತೇಕ ಅಕ್ಟೋಬರ್‌ನಲ್ಲಿ ನಡೆಸುವುದು ಖಚಿತ. ಎಐಸಿಟಿ ಸೂಚನೆಯಂತೆ ನಡೆಯಲಿದೆ. ಆನ್‌ಲೈನ್‌ ಕೌನ್ಸೆಲಿಂಗ್‌ ಗೆ ತಯಾರಿ ಮಾಡಿಕೊಂಡಿದ್ದೇವೆ. ಒಟ್ಟು ಎರಡು ಸುತ್ತಿನ ಕೌನ್ಸೆಲಿಂಗ್ ಮತ್ತು ಅಂತಿಮವಾಗಿ ಒಂದು ವಿಸ್ತರಣಾ ಸುತ್ತು ಇರುತ್ತದೆ. ಇದು ಕೇವಲ ಬದಲಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ಮಾಪಪ್ ರೌಂಡ್ ಆಗಿರುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು. ದಾಖಲೆ ಸಲ್ಲಿಸಿ ಜಾಯಿನ್ ಆಗಿ: 2ನೇ ಸುತ್ತಿನ ಕೌನ್ಸೆಲಿಂಗ್ ಮುಗಿಯುತ್ತಿದ್ದಂತೆ ತಮ್ಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕೊಂಚವೂ ತಡ ಮಾಡದೇ ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬೇಕು. ಒಂದು ವೇಳೆ ಶುಲ್ಕ ಪಾವತಿ ಮಾಡಿ ದಾಖಲೆಗಳನ್ನು ಸಲ್ಲಿಸದಿದ್ದರೆ ಆ ಪ್ರವೇಶಾತಿ ತಾನಾಗಿಯೇ ರದ್ದಾಗುತ್ತದೆ. ಈ ಅಂಶವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು. : - –- - -.