ಫೋನ್ ಕದ್ದಾಲಿಕೆ : ಹೊಸ ಬಾಂಬ್ ಸಿಡಿಸಿದ ಡಿ.ಕೆ ಶಿವಕುಮಾರ್… ಬೆಂಗಳೂರು, ಆಗಸ್ಟ್, 21, 2020(..): ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಕರೆ ಬಂದರೂ ವಾಯ್ಸ್ ಬರುತ್ತಿಲ್ಲ. ಈ ಬಗ್ಗೆ ದೂರು ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಬೆಳಗ್ಗೆಯಿಂದ ಸುಮಾರು 20 ಕರೆಗಳು ಬಂದಿದೆ. ಆದರೆ, ಯಾವುದರಲ್ಲಿಯೂ ವಾಯ್ಸ್ ಕೇಳುತ್ತಿಲ್ಲ. ನನ್ನ ಕರೆಗಳನ್ನು ಕದ್ದಾಲಿಕೆ ಮಾಡಲಿ. ಫೋನ್ ಕದ್ದಾಲಿಕೆ ಇದೇ ಮೊದಲೇನಲ್ಲ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. : -- - --