ತೀವ್ರ ನಿಗಾ ಘಟಕದಲ್ಲೇ ಎಸ್’ಪಿಬಿಗೆ ಚಿಕಿತ್ಸೆ ಬೆಂಗಳೂರು, ಆಗಸ್ಟ್ 21, 2020 (..):ಗಾಯಕ ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರನ್ನು ತೀವ್ರ ನಿಗಾ ಘಟಕದಲ್ಲಿ ಕೃತ ಉಸಿರಾಟ ವ್ಯವಸ್ಥೆಯಲ್ಲಿ ಅವರನ್ನು ಇಡಲಾಗಿದೆ. ಸದ್ಯ ಗಂಭೀರ ಸ್ಥಿತಿಯಲ್ಲೇ ಅವರು ಮುಂದುವರಿದಿದ್ದಾರೆ ಎಂದು ಎಂಜಿಎಂ ಆಸ್ಪತ್ರೆಯ ಅಧಿಕೃತ ಬುಲೆಟಿನ್​ನಲ್ಲಿ ಮಾಹಿತಿ ನೀಡಲಾಗಿದೆ. ಆಸ್ಪತ್ರೆಯ ವೈದ್ಯರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರ ಜೊತೆ ನಿರಂತರ ಸಂವಹನ ನಡೆಸುತ್ತಿದ್ದು, ಅವರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಎಂಜಿಎಂ ಆಸ್ಪತ್ರೆ ಬುಲೆಟಿನ್ ತಿಳಿಸಿದೆ.