ಮೈಸೂರು ದಸರಾ ಸರಳ ಆಚರಣೆಗೆ ನಿರ್ಧಾರ – ಸಿಎಂ ಯಡಿಯೂರಪ್ಪ ಸ್ಪಷ್ಟನೆ ಮೈಸೂರು, ಆಗಸ್ಟ್, 21, 2020(..) :ಕೊರೊನಾ ಹಿನ್ನೆಲೆ ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸರಕಾರ ತೀರ್ಮಾನಿಸಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದಸರಾ ಸಂಬಂಧ ಹಲವು ಚರ್ಚೆ ನಡೆಸಲಾಗಿದೆ. ಕೊರೊನಾದಿಂದಾಗಿ ನಾಡಹಬ್ಬವನ್ನು ಸರಳವಾಗಿ ಆಚರಿಸುವುದಕ್ಕೆ ತೀರ್ಮಾನಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ವಿಶ್ವವಿಖ್ಯಾತ ದಸರಾ ಸಂಬಂಧಿಸಿದಂತೆ ಜನರಲ್ಲಿ ಮನೆ ಮಾಡಿದ ಆತಂಕಕ್ಕೆ ತೆರೆ ಬಿದ್ದಿದ್ದು, ಕೊನೆಗೂ ಸರಳವಾಗಿ ಆಚರಣೆ ಮಾಡುವುದಕ್ಕೆ ಸರಕಾರವು ಮುಂದಾಗಿದೆ. : – - - - ..