ಮೃತ ನಂಜನಗೂಡು ಟಿಹೆಚ್ ಓ ಕುಟುಂಬಕ್ಕೆ 30 ಲಕ್ಷ.ರೂ ಪರಿಹಾರ… ಬೆಂಗಳೂರು,ಆ,20,2020(..): ಮೇಲಾಧಿಕಾರಿಗಳ ಕಿರುಕುಳ ಎಂಬ ಆರೋಪದಿಂದ ಆತ್ಮಹತ್ಯೆಗೆ ಶರಣಾದ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಂದ್ರ ಅವರ ಕುಟುಂಬಕ್ಕೆ ಮುವತ್ತು ಲಕ್ಷ ರೂ. ಪರಿಹಾರ ನೀಡಲು ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮತಿಸಿದ್ದಾರೆ. ನಂಜನಗೂಡು ವೈದ್ಯ ಡಾ. ನಾಗೇಂದ್ರ ಆತ್ಮಹತ್ಯೆ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳ ಜತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಚರ್ಚೆ ನಡೆಸಿದರು. ಚರ್ಚೆ ಸಂದರ್ಭದಲ್ಲಿ ನಿಯೋಗದ ಸದಸ್ಯರು, ನಾಗೇಂದ್ರ ಅವರ ಆತ್ಮಹತ್ಯೆಗೆ ಕರ್ತವ್ಯ ದಲ್ಲಿನ ಒತ್ತಡ ಕಾರಣ, ಇದಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು, ಕುಟುಂಬಕ್ಕೆ ಪರಿಹಾರದ ಜತೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಕೂಡ ಹಾಜರಿದ್ದರು. ನಿಯೋಗದ ಮನವಿ ಆಲಿಸಿದ ಸಚಿವ ಡಾ.ಕೆ ಸುಧಾಕರ್, ನಂತರ ಮುಖ್ಯಮಂತ್ರಿ ಅವರ ಜತೆ ದೂರವಾಣಿ ಮೂಲಕ ಮಾತನಾಡಿ ತಕ್ಷಣಕ್ಕೆ ಮುವತ್ತು ಲಕ್ಷ ರೂ. ಪರಿಹಾರ ಪ್ರಕಟಿಸಲು ವಿನಂತಿಸಿದಾಗ ಸಿಎಂ ಸಮ್ಮತಿಸಿದರು. ಈ ವಿಷಯವನ್ನು ಸಚಿವ ಸುಧಾಕರ್ ಅವರು ನಿಯೋಗಕ್ಕೆ ತಿಳಿಸಿದರು. : - - - - –-