ಬೆಂಗಳೂರು ಗಲಭೆ ಪ್ರಕರಣ: ಮತ್ತೊಬ್ಬ ಪ್ರಮುಖ ಆರೋಪಿ ಬಂಧನ… ಬೆಂಗಳೂರು, ಆಗಸ್ಟ್, 20, 2020(..): ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನ ಬಂಧಿಸಲಾಗಿದೆ. ಖಲೀದ್ ಬಂಧಿತ ಆರೋಪಿ ಡಿ.ಜೆ ಹಳ್ಳಿ ರೋಷನ್ ನಗರದ ನಿವಾಸಿಯಾದ ಖಲೀದ್ ಗಲಭೆಗೆ ಪ್ರಚೋದನೆ ನೀಡಿ ತಲೆಮರೆಸಿಕೊಂಡಿದ್ದ. ಈತನು ಮುಜಮ್ಮಿಲ್, ಆಯಾಜ್, ಆಫ್ನಾನ್ ಜೊತೆಗೂಡಿ ಎಸ್ ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿ ಗಲಭೆಗೆ ಮುಂದಾಗಿದ್ದ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿ ಖಲೀದ್ ನನ್ನ ಡಿ.ಜೆ ಹಳ್ಳಿ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. : - - – -