ಬೆಂಗಳೂರಿನ ಉದ್ಯಮಿಯೊಂದಿಗೆ ಕಾಜಲ್‌ ಅಗರ್ವಾಲ್‌ ಎಂಗೇಜ್ಮೆಂಟ್ ಬೆಂಗಳೂರು, ಆಗಸ್ಟ್ 20, 2020 (..):ಬಹುಭಾಷಾ ನಟಿ ಕಾಜಲ್‌ ಅಗರ್ವಾಲ್‌ ನಿಶ್ಚಿತಾರ್ಥದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಬೆಂಗಳೂರಿನ ಉದ್ಯಮಿ ಗೌತಮ್‌ ಅವರೊಂದಿಗೆ ಕಾಜಲ್‌ ಅಗರ್ವಾಲ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಅಧಿಕೃತವಾಗಿ ಪ್ರಕಟಿಸಿಲ್ಲ. ನಿಶ್ಚಿತಾರ್ಥಕ್ಕೆ ಕಾಜಲ್‌ ಆಪ್ತ ಸ್ನೇಹಿತ, ನಟ ಬಲ್ಲಂಕೊಂಡ ಸಾಯಿ ಶ್ರೀನಿವಾಸ್‌ ಸಾಕ್ಷಿಯಾಗಿದ್ದರು ಎನ್ನಲಾಗಿದೆ. ಆದರೆ, ನಿಶ್ಚಿತಾರ್ಥದ ಕುರಿತ ಯಾವುದೇ ಚಿತ್ರಗಳೂ ಬಹಿರಂಗವಾಗಿಲ್ಲ. ನಿಶ್ಚಿತಾರ್ಥದ ಕುರಿತ ಯಾವುದೇ ಚಿತ್ರಗಳೂ ಬಹಿರಂಗವಾಗಿಲ್ಲ. ಲಾಕ್‌ ಡೌನ್‌ ತೆರವಿನ ಕಾಜಲ್ ನಟಿ ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.