ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕಿದ್ರು ಅನ್ನಿಸುತ್ತಿದೆ- ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬೇಸರ ಬೆಂಗಳೂರು, ಆಗಸ್ಟ್, 19, 2020(..): ನನ್ನ ರಾಜಕೀಯ ಜೀವನ ಮುಗಿಸಲು ಪ್ರಯತ್ನ ನಡೆದಿದ್ದು, ನನ್ನ ಮನೆ ಸುಟ್ಟಿದಕ್ಕೆ ನನಗೆ ನೋವಿಲ್ಲ. ನನ್ನ ಮುಗಿಸಲು ಷಡ್ಯಂತ್ರ ನಡೆಸಿರುವುದು ನೋವು ನೀಡಿದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಲು ತೋಡಿಕೊಂಡಿದ್ದಾರೆ. ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಕಚೇರಿಯಲ್ಲಿ ಹಾಜರಾಗಿ ವಿಚಾರಣೆ ಎದುರಿಸಿದರು. ಈ ಸಮಯದಲ್ಲಿ ಮಾತನಾಡಿರುವ ಅಖಂಡ ಶ್ರೀನಿವಾಸಮೂರ್ತಿ, ನನ್ನವರೆ ನನಗೆ ಮುಳುವಾದರು. ನನ್ನ ವಿರುದ್ಧ ಸಂಚು ರೂಪಿಸಿದರು. ಇದನ್ನು ಸಹಿಸಲು ಆಗುತ್ತಿಲ್ಲ. ನಾವು ಮನೆಯಲ್ಲಿದದಿರೆ ಉಲಿಯುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆರಂಭದಿಂದಲೂ ನನಗೆ ಯಾರ ಮೇಲೂ ಅನುಮಾನವಿರಲಿಲ್ಲ. ಇದೀಗ ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕಿದ್ರು ಅನಿಸುತ್ತಿದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. : - -- - -