ಮಂಗಳೂರು ಏರ್ ಪೋರ್ಟ್ ಗೆ ಹುಸಿಬಾಂಬ್ ಕರೆ ಮಾಡಿದ್ದ ಆರೋಪಿ ಅರೆಸ್ಟ್… ಮಂಗಳೂರು,ಆ,20,2020(..): ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ್ದ ಆರೋಪಿಯನ್ನ ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಾಳ ತಾಲ್ಲೂಕಿನ ಮುರಾಡಿ ನಿವಾಸಿ ವಸಂತ(33) ಬಂಧಿತ ಆರೋಪಿ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಆರೋಪಿ ವಸಂತ ಕರೆ ಮಾಡಿದ್ದನು. ಈ ವೇಳೆ ಫೋನ್ ಟ್ರ್ಯಾಕ್ ಮಾಡಿ ಆರೋಪಿ ವಸಂತನನ್ನ ಬಜಪೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - –- –