ಸುಶಾಂತ್ ಸಾವಿನ ತನಿಖೆ ಸಿಬಿಐ ತೆಕ್ಕೆಗೆ ಬೆಂಗಳೂರು, ಆಗಸ್ಟ್, 19, 2020(..): : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂಜ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿದೆ. ಸುಶಾಂತ್ ಸಿಂಗ್ ಸಾವಿನ ರಹಸ್ಯ ಬೇಧಿಸುವಲ್ಲಿ ಮುಂಬೈ ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ಸುಶಾಂತ್ ಕುಟುಂಬದವರು, ಅಭಿಮಾನಿಗಳು ಸಿಬಿಐ ತನಿಖೆಗೆ ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತ್ತಾಗಿದೆ. ಸಿಬಿಐ ತನಿಖೆಗೆ ವಿರೋಧ ವ್ಯಕ್ತಪಡಿಸಿದ ಮುಂಬೈ ಪೊಲೀಸರಿಗೆ ಮುಖಭಂಗವಾಗಿದ್ದು, ಪೊಲೀಸರಲ್ಲಿಯೇ ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ ನ ಈ ಆದೇಶಕ್ಕೆ ನಟಿ ರಿಯಾ ಚಕ್ರವರ್ತಿ ಸಂತಸ ವ್ಯಕ್ತಪಡಿಸಿದ್ದಾರೆ. : – - -- -