ಕೊರೋನಾ ಕಣ್ಮರೆಯಾಗಲಿ: ‘ಗೌರಿ’ ನೆನೆದು ಮಹಿಳೆಯರಿಗೆ ಬಾಗಿನ ವಿತರಣೆ… ಮೈಸೂರು,ಆ,19,2020(..): ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಗೌರಿಗಣೇಶ ಹಬ್ಬದ ಸಂಭ್ರಮ ಕಡಿಮೆಯಾಗಿದ್ದು, ಗಣೇಶ ಪ್ರತಿಷ್ಟಾಪನೆಗೆ ರಾಜ್ಯ ಸರ್ಕಾರ ಕೆಲ ನಿರ್ಬಂಧಗಳನ್ನ ವಿಧಿಸಿದೆ. ಈ ಮಧ್ಯೆ ದೇಶದಿಂದ ಕೊರೋನಾ ಮಹಾಮಾರಿ ತೊಲಗಲೆಂದು ಮೈಸೂರಿನಲ್ಲಿ ಮಹಿಳಾ ಸೇವಾ ಪ್ರತಿಷ್ಠಾನ ವಿನೂತನ ಕಾರ್ಯಕ್ರಮ ಆಯೋಜಿಸಿತ್ತು. ದೇಶದಲ್ಲಿ ಕೊರೊನಾ ಮಹಾಮಾರಿ ತೊಲಗಲೆಂದು ಪ್ರಾರ್ಥಿಸಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಮಹಿಳಾ ಸೇವಾ ಪ್ರತಿಷ್ಠಾನ ವತಿಯಿಂದ ಬಾಗಿನ ವಿತರಣೆ ಮಾಡಲಾಯಿತು. ಮೈಸೂರಿನ ರಾಮಕೃಷ್ಣ ನಗರದ ಯೋಗ ಪಾರ್ಕ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪದಾಧಿಕಾರಿ ಸರಸ್ವತಿ ನೇತೃತ್ವದಲ್ಲಿ ಗೌರಿ ದೇವಿಯನ್ನ ನೆನೆದು ಮಹಿಳೆಯರಿಗೆ ಬಾಗಿನ ವಿತರಣೆ ಮಾಡಲಾಯಿತು. ಟ್ರಸ್ಟ್ ಮಹಿಳೆಯರು ಕುಂಕುಮ ಅರಿಸಿನ ಇಟ್ಟು ಬಾಗಿನ ವಿತರಣೆ ಮಾಡುವ ಮೂಲಕ ದೇಶದಿಂದ ಕೊರೋನಾ ಕಣ್ಮರೆಯಾಗಲೆಂದು ಪ್ರಾರ್ಥಿಸಿದರು. : - - - – ’