ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಮೂವರ ಮೃತದೇಹ ಪತ್ತೆ… ರಾಯಚೂರು,ಆ,18,2020(..): ರಾಯಚೂರಿನ ಕುರ್ವಕುಲ ಬಳಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಮಹಿಳೆಯರ ಮೃತದೇಹ ಪತ್ತೆಯಾಗಿದೆ. ತೆಲಂಗಾಣ ಗಡಿ ಭಾಗದ ಜುರಾಲಾ ಸಮೀಪದ ಅಣೆಕಟ್ಟು ಬಳಿ ಇಂದು ಬೆಳಿಗ್ಗೆ ಮೂವರು ಮಹಿಳೆಯರ ಶವ ಪತ್ತೆಯಾಗಿವೆ. ಘಟನೆ ನಡೆದು ಒಂದು ದಿನದ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ನಿನ್ನೆ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆಗಸ್ಟ್ 17 ರಂದು ತೆಲಂಗಾಣದ ಪಂಚಪಾಡುವಿನಿಂದ 13 ಮಂದಿ ಸಂತೆ ಮುಗಿಸಿಕೊಂಡು ತಮ್ಮ ಊರಿಗೆ ವಾಪಸ್ ಆಗುತ್ತಿದ್ದರು. ತೆಪ್ಪದಲ್ಲಿ ಮರಳುತ್ತಿದ್ದ ವೇಳೆ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾಗಿದ್ದರು. ಒಬ್ಬ ಬಾಲಕಿ ಮತ್ತು ಮೂವರು ಮಹಿಳೆಯರು ನಾಪತ್ತೆಯಾಗಿದ್ದರು. : - --- -