ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಕೇಸ್: ನಷ್ಟದ ವರದಿಗೆ ಪ್ರತ್ಯೇಕ ತಂಡ ರಚನೆ.. ಬೆಂಗಳೂರು, ಆ,17, 2020(..): ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಷ್ಟದ ವರದಿ ನೀಡಲು ಪ್ರತ್ಯೇಕ ತಂಡ ರಚಿಸಲಾಗುತ್ತಿದ್ದು, ಎಫ್ ಐ ಆರ್ ಅನ್ವಯ ನಷ್ಟದ ವರದಿ ಸಿದ್ಧಪಡಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದರು. ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಸಂಬಂಧಿಸಿದಂತೆ ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಶೋಧ ಕಾರ್ಯ ನಡೆಯುತ್ತಿದೆ. ಮುದಾಸೀರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಜಾಕೀರ್-ಸೋಹೆಲ್ ಗಲಭೆಯ ಲೈವ್ ವಿಡಿಯೋ ಹಾಕಿ ಪ್ರಚೋದನೆ ನೀಡಿ ನಾಪತ್ತೆಯಾಗಿದ್ದರು. ಇವರನ್ನು ನೆನ್ನೆ ರಾತ್ರಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪಿಡಬ್ಲ್ಯೂಡಿ, ಆರ್ ಟಿ ಒ ಇಲಾಖೆಯಿಂದ ಗಲಭೆಯಲ್ಲಿ ನಷ್ಟವಾಗಿರುವ ವರದಿಯನ್ನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ. : - - - - -.