ಇಂಜಿನಿಯರಿಂಗ್ ಪ್ರವೇಶ ಶುಲ್ಕದಲ್ಲಿ ಹೆಚ್ಚಳವಿಲ್ಲ –ಡಿಸಿಎಂ ಅಶ್ವಥ್ ನಾರಾಯಣ್… ಬೆಂಗಳೂರು, ಆಗಸ್ಟ್, 17, 2020(..): ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಎಂಜಿನಿಯರಿಂಗ್ ಪ್ರವೇಶ ಶುಲ್ಕದಲ್ಲಿ ಹೆಚ್ಚಳವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು. ಈ ಕುರಿತು ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕಳೆದ ಬಾರಿ ಎಂಜಿನಿಯರಿಂಗ್ ಪ್ರವೇಶ ಶುಲ್ಕವನ್ನು 33% ಹೆಚ್ಚಳ ಮಾಡಲಾಗಿತ್ತು. ಆದರೆ, ಈ ಬಾರಿ ಕೊರೋನಾದಿಂದಾಗಿ ಯಾವುದೇ ರೀತಿಯಾಗಿ ಪ್ರವೇಶ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ. ಕಳೆದ ಬಾರಿಯಂತೆ ಸೀಟು ಹಂಚಿಕೆ ನಡೆಯಲಿದ್ದು, ಅಕ್ಟೊಂಬರ್ ನಲ್ಲಿ ಕೌನ್ಸಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ. : – - - -- .