ಸೋಷಿಯಲ್ ಮೀಡಿಯಾ ‘ಪುಂಡರಿಗೆ’ ಕಡಿವಾಣ ಹಾಕಲು ಪ್ಲಾನ್: ಗೃಹ ಸಚಿವ ಬಸವರಾಕ್ ಬೊಮ್ಮಾಯಿ ಬೆಂಗಳೂರು, ಆಗಸ್ಟ್ 16, 2020 (..):ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಿತ ಕಮೆಂಟ್, ಪೋಸ್ಟ್ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆ ತೀರ್ಮಾನಿಸಲಾಗಿದೆ. ಗೃಹ ಸಚಿವ ಬಸವರಾಕ್ ಬೊಮ್ಮಾಯಿ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಫೇಸ್ ಬುಕ್, ಇನ್ಟಾಗ್ರಾಂ, ವ್ಯಾಟ್ಸಪ್ ಸೇರಿ ಸಾಮಾಜಿಕ‌ ಜಾಲತಾಣಗಳಲ್ಲಿ ಪ್ರಚೋದಿತ ಕಮೆಂಟ್ ಗಳನ್ನು ಪೋಸ್ಟ್ ಮಾಡುವವರಿಗೆ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಫೇಸ್‌ಬುಕ್, ಇನ್ಸ್ಟಾ ಗ್ರಾಂನಲ್ಲಿ ಶಾಂತಿಭಂಗ, ಜನರ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಆಗ್ತಿದೆ. ಘಟನೆ ಆದ ಮೇಲೆ ಕ್ರಮ ತೆಗೆದುಕೊಳ್ಳೋದು ಒಂದು ಭಾಗ. ಘಟನೆ ಆಗುವ ಮುನ್ನವೇ ಯಾವ ರೀತಿ ಕ್ರಮ ತೆಗದುಕೊಳ್ಳಬಹುದು ಎಂದು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.