ಮೈಸೂರಿನಲ್ಲಿ ‘ ಡ್ರೋಣ್ ಸಂದೀಪ್’ ಬಂಧನ. ಮೈಸೂರು, ಆ.15, 2020 : (.. ) : ಅತಿಕ್ರಮವಾಗಿ ಡ್ರೋಣ್‌ ಮೂಲಕ ಕೆ.ಆರ್‌.ಎಸ್‌. ಜಲಾಶಯದ ಚಿತ್ರೀಕರಣ ನಡೆಸಿದ್ದ ವಿದ್ಯಾರ್ಥಿ ಬಂಧನ. ಮೈಸೂರಿನ ಜೆ.ಎಸ್.ಎಸ್. ಪಾಲಿಟೆಕ್ನಿಕ್ ನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೊಮೊ ವ್ಯಾಸಂಗ ಮಾಡುತ್ತಿರುವ 21 ವರ್ಷದ ಸಂದೀಪ್ ಬಂಧಿತ ವಿದ್ಯಾರ್ಥಿ. ಈತ ಆ.10 ರಂದು ಸಂಜೆ 4 ಗಂಟೆಗೆ ತನ್ನ ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ್ದ ಕೆಆರ್‌ಎಸ್‌ ಜಲಾಶಯದ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ನಿರ್ಬಂಧಿತ ಪ್ರದೇಶವಾದ ಕೆಆರ್‌ಎಸ್‌ ಡ್ಯಾಂ ಮೇಲೆ ಅನುಮತಿ ಇಲ್ಲದೆ ಡ್ರೋನ್ ಹಾರಿಸಿದ್ದ.ಈ ಘಟನೆಗೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಕಿಶೋರ್ ಕುಮಾರ್, ಆ.14 ರಂದು ಕೆಆರ್‌ಎಸ್‌ ಠಾಣೆಗೆ ದೂರು‌ ನೀಡಿದ್ದರು . ಈ ದೂರಿನ ಅನ್ವಯ ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸರು, ಮೈಸೂರಿನ ಬಲ್ಲಾಳ್ ಸರ್ಕಲ್ ನಲ್ಲಿ ಆರೋಪಿ ಸಂದೀಪ್ ನನ್ನು ಅದೇ ದಿನ ಸಂಜೆ ವೇಳೆಗೆ ಬಂಧಿಸಿ ಕೆ.ಆರ್.ಎಸ್. ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.ಈ ವೇಳೆ ಆತ, ಅನುಮತಿ ಇಲ್ಲದೆ ಡ್ರೋನ್ ಹಾರಿಸಿದ್ದು, ಜಲಾಶಯ ಚಿತ್ರೀಕರಣ ನಡೆಸಿದ್ದನ್ನು ಒಪ್ಪಿಕೊಂಡ. ಬಂಧಿತ ವಿದ್ಯಾರ್ಥಿಯಿಂದ ಪೊಲೀಸರು , ಕೃತ್ಯಕ್ಕೆ ಬಳಸಿದ ಡ್ರೋಣ್, ಡ್ರೋಣ್ ಕಂಟ್ರೋಲರ್ ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. : ------.-