ವಿವಾದಿತ ಪೋಸ್ಟ್ ಹಾಕಿದ್ದು ನಾನೇ- ತಪ್ಪೊಪ್ಪಿಕೊಂಡ ಆರೋಪಿ ನವೀನ್… ಬೆಂಗಳೂರು,ಆ,14,2020(..): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧ ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದು ನಾನೇ ಎಂದು ಆರೋಪಿ ನವೀನ್​ ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈ ಕುರಿತು ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿ ನವೀನ್, ವಿವಾದಿತ ಪೋಸ್ಟ್ ಹಾಕಿದ್ದು ನಾನೇ. ಕಮೆಂಟ್ ಮಾಡಿ ಪೋಸ್ಟ್ ಹಾಕಿದ್ದು ನಾನೇ. ರಾತ್ರಿ 7 ಗಂಟೆಗೆ ಹಾಕಿ 8 ಗಂಟೆಗೆ ಡಿಲೀಟ್ ಮಾಡಿದೆ. ಆದರೆ ಹೀಗೆಲ್ಲಾ ಆಗುತ್ತೆ ಎಂದು ಗೊತ್ತಾಗಲಿಲ್ಲ ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಶಾಸಕ ಅಖಂಡ ಶ್ರೀನಿವಾಸ್​ ಅಕ್ಕನ ಮಗನಾಗಿರುವ ಆರೋಪಿ ನವೀನ್​ ಸಾಮಾಜಿಕ ಜಾಲತಾಣಗಳಲ್ಲಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಗಲಭೆಗಳು ನಡೆದು ಕಿಡಿಗೇಡಿಗಳು ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದ್ದರು. ಈ ಮೊದಲು ಮೊಬೈಲ್​ ಫೋನ್​ ಕಳೆದುಹೋಗಿದೆ ಹಾಗೂ ಫೇಸ್​ಬುಕ್​ ಹ್ಯಾಕ್​ ಆಗಿದೆ ಎಂದು ನವೀನ್​ ಹೇಳಿಕೆ ನೀಡಿದ್ದ. ಇದೀಗ ತಪ್ಪೊಪ್ಪಿಕೊಂಡಿರುವ ನವೀನ್​, ಫೇಸ್​ಬುಕ್​ನಲ್ಲಿ ಸ್ಟೆಟಸ್ ಹಾಕಿಕೊಂಡಿದ್ದು ನಾನೇ ಎಂದು ಹೇಳಿದ್ದಾನೆ. : - - - - – .