ಸುಟ್ಟು ಕರಕಲಾಗಿರುವ ಮನೆ ಕಂಡು ಭಾವುಕರಾದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಪತ್ನಿ… ಬೆಂಗಳೂರು,ಆ,13,2020(..): ಕೆ.ಜಿ ಹಳ್ಳಿ, . ಕಾವಲ್ ಭೈರಸಂದ್ರದಲ್ಲಿ ಗಲಭೆ ವೇಳೆ ಸುಟ್ಟು ಕರಕಲಾಗಿರುವ ತಮ್ಮ ಮನೆಯನ್ನ ನೋಡಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಪತ್ನಿ ಕ್ರಿಯಾಶೈಲಜಾ ಅವರು ಭಾವುಕರಾದರು. ಇಂದು ಕಾವಲ್ ಭೈರಸಂದ್ರಕ್ಕೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಕುಟುಂಭ ಭೇಟಿ ನೀಡಿ ಸುಟ್ಟು ಕರಕಲಾಗಿರುವ ತಮ್ಮ ಮನೆಯನ್ನ ಪರಿಶೀಲಿಸಿದರು. ಗಲಭೆ ವೇಳೆ ಹಾನಿಯಾದ ಮುನೇಗೌಡರ ಮನೆಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭೇಟಿ ನೀಡಿ ಮುನೇಗೌಡರ ಜತೆ ಮಾತುಕತೆ ನಡೆಸಿದರು. ಸುಟ್ಟಿಹೋಗಿರುವ ಮನೆ ಸುತ್ತಮುತ್ತ ಪರಿಶೀಲಿಸಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯನ್ನ ನೋಡಿ ಮರುಗಿದರು. ಮನೆ ಸ್ಥಿತಿನೋಡಿ ಶಾಸಕ ಶ್ರೀನಿವಾಸಮೂರ್ತಿ ಪತ್ನಿ ಕ್ರಿಯಾ ಶೈಲಜಾ ಅವರು ಕಣ್ಣೀರಿಟ್ಟರು. ನಮ್ಮ ಮನೆ ಎಲ್ಲಿದೆ ನಾವು ಎಲ್ಲಿ ಇರಲಿ. ನಮಗೆ ಭದ್ರತೆ ಕೊಡಿ ಎಂದು ಕ್ರಿಯಾ ಶೈಲಜಾ ಅವರು ಕಣ್ಣೀರಿಟ್ಟರು. ಇದೇ ವೇಳೆ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಮ್ಮ ಜೀವಕ್ಕೆ ಅಪಾಯ ಅಂದ್ರೆ ಜನಸಾಮಾನ್ಯರ ಗತಿ ಏನು…? ಹೊರಗಿನಿಂದ ಬಂದವರಿಂದಲೇ ಈ ಕೃತ್ಯ ನಡೆದಿದೆ. ಪ್ರಕರಣದ ಬಗ್ಗೆ ದೂರು ನೀಡುತ್ತೇನೆ. ನನ್ನನ್ನ ಟಾರ್ಗೆಟ್ ಮಾಡಿದವರ ಬಗ್ಗೆ ತನಿಖೆಯಾಗಲಿ. ಪ್ರಕರಣವನ್ನ ಸಿಬಿಐಗೆ ಒಪ್ಪಿಸಲಿ ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ. ನಮ್ಮ ತಾಯಿಯ ಮಾಂಗಲ್ಯ ಸರವನ್ನೂ ದೋಚಿದ್ದಾರೆ. ದಯವಿಟ್ಟು ಮಾಂಗಲ್ಯ ಸರವನ್ನಾದ್ರೂ ತಂದು ಕೊಡಲಿ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬೇಡಿಕೊಂಡಿದ್ದಾರೆ. : - - - - --