ಮಾಜಿ ಸಿಎಂ ಸಿದ್ಧರಾಮಯ್ಯರಿಗೆ 73ನೇ ವರ್ಷದ ಹುಟ್ಟುಹಬ್ಬ: ಮೈಸೂರಿನಲ್ಲಿ ಬೆಂಬಲಿಗರಿಂದ ವಿಶೇಷ ಪೂಜೆ ಸಲ್ಲಿಕೆ… ಮೈಸೂರು,ಆ,12,2020(..): ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು 73ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದ್ದು ಈ ಹಿನ್ನೆಲೆ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಂಗಲಿಗರು ವಿಶೇಷ ಪೂಜೆ ಸಲ್ಲಿಸಿದರು. ನಗರದ ಅಗ್ರಹಾರದ ನೂರೊಂದು ಗಣಪತಿ ದೇವಾಲಯದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ತಮ್ಮ ನೆಚ್ಚಿನ ನಾಯಕ ಶೀಘ್ರ ಗುನಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕಿರಾಳ ಸಂತೋಷ್, ರಾಯನಹುಂಡಿ ರವಿ, ಚಿಕ್ಕಳ್ಳಿ ಸಚಿನ್ ಕೃಷ್ಣಮೂರ್ತಿ, ಮೆಲ್ಲಹಳ್ಳಿ ಮಹದೇವಸ್ವಾಮಿ ಮಾಕನಹುಂಡಿ ಮರಿಗೌಡ, ಲಲಿತಾದ್ರಿಪುರ ರಂಗಯ್ಯ, ರಾಜೇಶ್, ವಾಜಮಂಗಲ ಚಂದ್ರು, ಸುಪ್ರೀತ್, ಆನಂದ್ ವರುಣ ಪ್ರಶಾಂತ್ ಪಟೇಲ್,ಸಂತೋಷ್, ಸೋಮೇಶ್ವರಪುರಸಿದ್ಧರಾಜು, ಮತ್ತು ವರುಣ ಹೋಬಳಿ ಕಾರ್ಯಕರ್ತರಿದ್ದರು. : ----