ಬೆಂಗಳೂರಿನ ಈ ರಸ್ತೆ ಒಂದು ವರ್ಷದ ವರೆಗೂ ಭಾಗಶಃ ಸಂಚಾರಕ್ಕೆ ಮುಚ್ಚಿರುತ್ತದೆ..! ಬೆಂಗಳೂರು, .30, 2024 : (..) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ () ಬನ್ನೇರುಘಟ್ಟ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಒಂದು ಸಲಹೆಯನ್ನು ನೀಡಿದೆ. ಬೆಂಗಳೂರು ಮೆಟ್ರೋ ನಿರ್ಮಾಣದ ಪರಿಣಾಮವಾಗಿ, ಆನೆಪಾಳ್ಯ ಜಂಕ್ಷನ್‌ಗೆ ಸಿಗ್ನಲ್‌ನ ಉದ್ದಕ್ಕೂ ಒಂದು ವರ್ಷದವರೆಗೆ ಭಾಗಶಃ ಸಂಚಾರ ಮುಚ್ಚಲಾಗುತ್ತದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ, ‘ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ಗೆ ಉತ್ತರದ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಏಪ್ರಿಲ್ 1, 2024 ರಿಂದ ಒಂದು ವರ್ಷದವರೆಗೆ ರಸ್ತೆ ಬಂದ್‌ ಆಗಲಿದೆ. ದಕ್ಷಿಣ ಭಾಗದ ಪ್ರವೇಶದ ನಿರ್ಮಾಣದಿಂದಾಗಿ ಈ ರಸ್ತೆ ಬಂದ್‌ ಅನಿವಾರ್ಯವಾಗಿದೆ. ಈ ಅವಧಿಯಲ್ಲಿ, ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಆನೆಪಾಳ್ಯ ಜಂಕ್ಷನ್‌ಗೆ ತಲುಪಲು ಉದ್ದೇಶಿಸಿರುವ ವಾಹನ ಚಾಲಕರನ್ನು ಸಿಗ್ನಲ್‌ನಲ್ಲಿ ಬಲ ತಿರುವು ಪಡೆಯಲು ಮರುನಿರ್ದೇಶಿಸಲಾಗುತ್ತದೆ, ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್‌ಗೆ ತೆರಳಿ ನಂತರ ಅವರು ಎಡ ತಿರುವು ಪಡೆಯಬೇಕು. ಆದರೆ, ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ವೃತ್ತದ ಕಡೆಗೆ ಸಂಚಾರಕ್ಕೆ ಯಾವುದೇ ವ್ಯತ್ಯಯ ಇರುವುದಿಲ್ಲ. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಹೋಗುವವರು ವಿಲ್ಸನ್ ಗಾರ್ಡನ್‌ನ 7ನೇ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುಗುವಂತೆ ಸೂಚಿಸಲಾಗಿದೆ. ಲಕ್ಕಸಂದ್ರ ಅಂಡರ್‌ ಗ್ರೌಂಡ್‌ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ರಚನೆಯಲ್ಲಿ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿರುವಾಗ ಟ್ರಾಫಿಕ್ ಹರಿವನ್ನು ಸುಗಮಗೊಳಿಸಲು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಈ ಮುಂಜಾಗ್ರತ ಕ್ರಮ ಜರುಗಿಸಲಾಗಿದೆ. ಪ್ರಯಾಣಿಕರು ಈ ಬದಲಾವಣೆ ಗಮನಿಸಿ, ಅನಾನುಕೂಲತೆಯಿಂದ ಪಾರಾಗಲು ಸೂಚಿಸಿರುವ ಮಾರ್ಗಗಳನ್ನುಅನುಸರಿಸುವಂತೆ ಬಿಎಂಆರ್ಸಿಎಲ್‌ ಕೋರಿದೆ. : , , , , 1 : () . , . , ‘ - 1, 2024. .’