ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ: ನಾಡಿನ ಜನತೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ಶುಭಾಶಯ… ಬೆಂಗಳೂರು,ಆ,11,2020(..): ಇಂದು ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ನಾಡಿನ ಜನತೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ಶುಭಾಶಯ ಕೋರಿದ್ದಾರೆ. ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಮಥುರಾವನ್ನು ಕಂಸನಿಂದ ರಕ್ಷಿಸುವ ಸಲುವಾಗಿಯೇ ದೇವಕೀಸುತನ ಜನನವಾಯಿತು. ಪಾಂಡವ, ಕೌರವರ ನಡುವಣ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲೂ ಪಾಂಡವರ ಜಯದಲ್ಲಿ ಶ್ರೀಕೃಷ್ಣನ ಪಾತ್ರ ಹಿರಿದು. ಹೀಗೆ ಶ್ರೀಕೃಷ್ಣನ ಚರಿತಾರ್ಮೃತವೇ ಅದ್ಭುತ. ಇಂದು ಜಗತ್ತನ್ನು ಕಾಡುತ್ತಿರುವ ಮಹಾ ಕಂಟಕ ಕೊರೊನಾ ಮತ್ತು ರಾಷ್ಟ್ರದ ಅನೇಕ ಭಾಗಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಅನುಭವಿಸುತ್ತಿರುವ ನೆರೆ ಹಾವಳಿಯಿಂದ ಸಮಸ್ತ ಜನತೆಯ ಸಂಕಷ್ಟವನ್ನು ಶ್ರೀ ಕೃಷ್ಣ ಪರಮಾತ್ಮನು ದೂರ ಮಾಡಲಿ ಎಂದು ಪ್ರಾರ್ಥಿಸುತ್ತೀನಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಶುಭಕೋರಿದ್ದಾರೆ. : - - - -