ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಬೈಕ್ ಸವಾರ ಸಜೀವ ದಹನ… ದಕ್ಷಿಣ ಕನ್ನಡ,ಆ,11,2020(..): ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಡ್ಪಿನಂಗಡಿ ಬಳಿ ಈ ಘಟನೆ ನಡೆದಿದೆ. ಅಜ್ಜಾವರ ಮೂಲದ ಬೈಕ್ ಸವಾರ ಸಾವನ್ನಪ್ಪಿರುವ ವ್ಯಕ್ತಿ. ಬಲ್ಪೆ ಗ್ರಾಮದ ಸಂಬಂಧಿ ಮನೆಯಿಂದ ಬೆಳಿಗ್ಗೆ ಹೊರಟಿದ್ದ ಬೈಕ್ ಸವಾರ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ್ದಾನೆ. ಈ ವೇಳೆ ವ್ಯಕ್ತಿ ಸಜೀವದಹನವಾಗಿದ್ದು, ಬೈಕ್ ಸುಟ್ಟುಕರಕಲಾಗಿದೆ ಎಂದು ಹೇಳಲಾಗುತ್ತಿದೆ. : - – - -