ಡಿವೋರ್ಸ್ ಕೇಳಿದ ಪತ್ನಿ: ವಕೀಲರ ಕಚೇರಿಯಲ್ಲೇ ಕೊಲೆಗೆ ಯತ್ನಿಸಿದ ಪತಿ ಮೈಸೂರು,ಆ,10,2020(..): ಡಿವೋರ್ಸ್ ಕೇಳಿದ ಪತ್ನಿಯನ್ನ ಪತಿರಾಯನೊಬ್ಬ ವಕೀಲರ ಕಚೇರಿಯಲ್ಲೇ ಕೊಲೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಈ ಘಟನೆ ನಡೆದಿದೆ. ರಘು ಎಂಬಾತನೇ ವಕೀಲರ ಕಚೇರಿಯಲ್ಲೇ ಪತ್ನಿ ಮಮತಾರನ್ನ ಕೊಲ್ಲಲು ಯತ್ನಿಸಿದ್ದು ಹಲ್ಲೆಯಿಂದ ಗಾಯಗೊಂಡ ಮಮತಾರನ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಸಾಂಸಾರಿಕ ಜೀವನದಲ್ಲಿ ವಿರಸ ಉಂಟಾದ ಹಿನ್ನೆಲೆಯಲ್ಲಿ ಪತ್ನಿ ಮಮತಾ ಪತಿ ರಘುವಿನಿಂದ ಡಿವೋರ್ಸ್ ಕೇಳಿದ್ದರು. ಈ ಬಗ್ಗೆ ವಕೀಲರನ್ನು ಭೇಟಿಯಾಗಲು ಮಮತಾ ಬಂದಿದ್ದರು. ಈ ವೇಳೆ ವಕೀಲರ ಕಚೇರಿಯಲ್ಲೇ ಪತಿ ರಘು ಪತ್ನಿ ಮಮತಾರ ಕೊಲೆಗೆ ಯತ್ನಿಸಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಯಿತು. : - – - – – ’- .