ಜೆಎಸ್ ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಇಮ್ಯೂನ್ ಬೂಸ್ಟರ್ ಕಿಟ್ ಬಿಡುಗಡೆ…. ಮೈಸೂರು,ಆ,10,2020(..): ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳನ್ನೊಳಗೊಂಡ ಇಮ್ಯೂನ್ ಬೂಸ್ಟರ್ ಕಿಟ್ ಅನ್ನ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ವತಿಯಿಂದ ಬಿಡುಗಡೆ ಮಾಡಲಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು ಇಮ್ಯೂನ್ ಬೂಸ್ಟರ್ ಕಿಟ್ ಅನ್ನ ಬಿಡುಗಡೆ ಮಾಡಿದರು. ಈ ಇಮ್ಯೂನ್ ಬೂಸ್ಟರ್ ಕಿಟ್ ನಲ್ಲಿ ರೋಗ ನೀರೊಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳಿರುತ್ತವೆ. ಚ್ಯವನಪ್ರಾಶ, ಹರಿದ್ರಾರಸ, ಕಷಾಯ ಚೂರ್ಣ, ರಕ್ಷೋಘ್ನ ಧೂಪ, ಅಣುತೈಲ ಆಯುರ್ವೇದ ಔಷಧಿಗಳನ್ನ ಈ ಕಿಟ್ ಒಳಗೊಂಡಿದೆ. ಈ ಕಿಟ್ ಅನ್ನ ಕೊರೋನಾ ತಡೆಗೆ ಮತ್ತು ಕರೋನಾ ಸೋಂಕಿತರು ಇಮ್ಯೂನ್ ಹೆಚ್ಚಿಸಿಕೊಳ್ಳಲು ಬಳಸಬಹುದಾಗಿದೆ. : - - – - -