ಕೊರೋನಾ ಸೇವೆಗೆ ‘ಸ್ವಯಂ ಪ್ರೇರಿತ ಕಾರ್ಯಪಡೆ’ : ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಿದ ಜಾವಗಲ್ ಶ್ರೀನಾಥ್ ಮೈಸೂರು,ಆ,10,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಬ್ಬರಿಸುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಜಿಲ್ಲಾಡಳಿತ ಹರಸಾಹಸಪಡುತ್ತಿದ್ದು, ಈ ಮಧ್ಯೆ ಕೊರೊನಾ ಸೇವೆಗಾಗಿ ಸ್ಥಳೀಯ ನಿವಾಸಿಗಳು ಸ್ವಯಂಪ್ರೇರಿತರಾಗಿ ನಿಂತದ್ದಾರೆ. ಹೌದು, ಮೈಸೂರಿನ ಶಾರದಾದೇವಿನಗರದ ಸ್ಥಳೀಯ ನಿವಾಸಿಗಳೇ ಸೇರಿಕೊಂಡು ಕೊರೊನಾ ಕಾರ್ಯ ಪಡೆ ರಚನೆ ಮಾಡಿದ್ದಾರೆ. ವಾರ್ಡ್ ನಂ 45 ರ ನಿವಾಸಿಗಳು ಈ ಸ್ವಯಂಪ್ರೇರಿತ ಕಾರ್ಯ ಪಡೆ ರಚನೆ ಮಾಡಿದ್ದು ಈ ಮೂಲಕ ಕೊರೋನಾ ಸೋಂಕಿಗೆ ಒಳಗಾದ ಕುಟುಂಬಗಳಿಗೆ ಅಗತ್ಯ ಸೇವೆ ನೀಡಲುಈ ಸ್ವಯಂಸೇವಕರು ಮುಂದಾಗಿದ್ದಾರೆ. ಇನ್ನು ಕಾರ್ಯಪಡೆಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್, ಹರೀಶ್ ಸೇರಿದಂತೆ ಕಾರ್ಯಪಡೆ ಸದಸ್ಯರು ಭಾಗಿಯಾಗಿದ್ದರು. : - .- -- –