ಜನ್ಮ ದಿನಾಂಕ ತಿರುಚಿ ಚುನಾವಣೆಗೆ ಸ್ಪರ್ಧೆ ಪ್ರಕರಣ; ಬಂಧನ ಭೀತಿಯಲ್ಲಿ ಮಾಜಿ ಸಚಿವ ಮತ್ತು ಪುತ್ರ ಬಳ್ಳಾರಿ,ಆ,8,2020(..): ಜನ್ಮ ದಿನಾಂಕ ತಿರುಚಿ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರ ಭರತ್ ನಾಯ್ಕ್ ವಿರುದ್ದ ಎಫ್ ಐಆರ್ ಧಾಖಲಾಗಿದೆ. ಪುತ್ರನ ವಯಸ್ಸಿನ ಸುಳ್ಳು ದಾಖಲೆ ಸೃಷ್ಟಿಸಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಆರೋಪದ ಮೇಲೆ ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಪುತ್ರ ಪಿ.ಟಿ. ಭರತ್ ಹಾಗೂ ಶಾಲಾ ಮುಖ್ಯಶಿಕ್ಷಕ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. 2015ರಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಲು ಪರಮೇಶ್ವರ ನಾಯ್ಕ್ ಅವರ ಪುತ್ರ ಪಿ.ಟಿ. ಭರತ್ ಅವರ ಜನ್ಮ ದಿನಾಂಕ ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಜನ್ಮದಿನಾಂಕ ತಿರುಚಿರುವುದು ದೃಢಪಟ್ಟಿದ್ದು ಈ ಹಿನ್ನೆಲೆ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರ ಭರತ್ ನಾಯ್ಕ್ ವಿರುದ್ದ ಎಫ್ ಐಆರ್ ಧಾಖಲಾಗಿದೆ. ಪಿ.ಟಿ ಪರಮೇಶ್ವರ್ ನಾಯ್ಕ್ ಮತ್ತು ಪುತ್ರ ಭರತ್ ನಾಯ್ಕ್ ಬಂಧನ ಭೀತಿ ಎದುರಿಸುತ್ತಿದ್ದು ನಿರೀಕ್ಷಣಾ ಜಾಮೀನು ಪಡೆಯಲು ಹರಸಾಹಸಪಡುತ್ತಿದ್ದು ತಲೆಮರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. : – - –- - -