ಉಕ್ಕಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ: ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ…. ಮೈಸೂರು,ಆ,7,2020(..): ರಾಜ್ಯದಲ್ಲಿ ಕೊರೋನಾ ಆರ್ಭಟದ ನಡುವೆ ವರುಣನ ಆರ್ಭಟವೂ ಜೋರಾಗಿದ್ದು , ಕಾವೇರಿ ಕೊಳ್ಳದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಹೀಗಾಗಿ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅಲ್ಪ ಸ್ವಲ್ಪ ಬೆಳೆ ಪಡೆಯಲು ಜನ ನೀರಿಗಿಳಿದು ಶುಂಠಿ ಬೇಳೆ ಕಟಾವು ಮಾಡುತ್ತಿದ್ದಾರೆ. ಮತ್ತೊಂದೆಡೆ ಕೊಪ್ಪರಿಗೆಗಳನ್ನು ಬಳಸಿ ಮುಸುಕಿನ ಜೋಳವನ್ನ ರೈತರು ಸಂಗ್ರಹಿಸುತ್ತಿದ್ದಾರೆ. ಭಾರಿ ಮಳೆ ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹದಿಂದಾಗಿ ಹುಣಸೂರು ತಾಲೂಕು ಹನಗೋಡು, ಶಿಂಡೇನಹಳ್ಳಿ ವ್ಯಾಪ್ತಿಯಲ್ಲಿ ರೈತರ ಸಂಕಷ್ಟ ಎದುರಾಗಿದ್ದು ಶುಂಠಿ ಹಾಗೂ ಮೆಕ್ಕೆಜೋಳ ಬೆಳೆಗಳು ನಾಶವಾಗಿವೆ. ಕಳೆದ ವರ್ಷವೂ ಈ ಭಾಗದ ನೆರೆಗೆ ತುತ್ತಾಗಿ ಅಪಾರ ನಷ್ಟ ಹೊಂದಿತ್ತು. : - - - - -