ಯುಎಸ್ ಓಪನ್‌’ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ರಾಫೆಲ್ ನಡಾಲ್ ವಾಷಿಂಗ್ಟನ್, 06, 2020 (..):ರಾಫೆಲ್ ನಡಾಲ್ ಕೂಡ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿಯುವುದನ್ನು ಖಚಿತಪಡಿಸಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ವರ್ಷದ ಯುಎಸ್ ಓಪನ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ನಡಾಲ್ ತಿಳಿಸಿದ್ದಾರೆ. ‘ಕೋವಿಡ್-19’ ಪ್ರಕರಣಗಳ ಏರಿಕೆಯಿಂದಾಗಿ ಈಗ ವಿಶ್ವದೆಲ್ಲೆಡೆ ಸಂಕಷ್ಟದ ಸಮಯವಿದೆ. ಹೀಗಾಗಿ ಈ ಸಾಲಿನ ಯುಎಸ್ ಓಪೆನ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಚಿಕಿತ್ಸೆಯ ಕಾರಣದಿಂದಾಗಿ ರೋಜರ್ ಫೆಡರರ್‌ ಈ ವರ್ಷದ ಎಲ್ಲಾ ಗ್ರ್ಯಾಂಡ್‌ಸ್ಲ್ಯಾಮ್‌ಗಳಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಇದೀಗ ಮತ್ತೊಬ್ಬರು ಸ್ಟಾರ್ ಪ್ಲೇಯರ್ ಕೂಡ ಇದೇ ನಿರ್ಧಾರ ಪ್ರಕಟಿಸಿದ್ದಾರೆ.