ಮಹಾಮಾರಿ ಕೊರೋನಾಗೆ ಸರ್ಕಾರಿ ವೈದ್ಯ ಬಲಿ… ಮೈಸೂರು,ಆ,7,2020(..): ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ತಲ್ಲಣಿಸುತ್ತಿದ್ದು, ಊ ನಡುವೆ ಮೈಸೂರಿನಲ್ಲಿ ಕೊರೋನಾದಿಂದ ಸರ್ಕಾರಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಮೃತಪಟ್ಟಿದ್ದಾರೆ. ಮೃತ ವೈದ್ಯ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಮಕ್ಕಳ ತಜ್ಞರಾಗಿದ್ದರು. ಇವರು ಕಳೆದ 20 ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ವೈದ್ಯ ಕೊನೆಯುಸಿರೆಳೆದಿದ್ದಾರೆ. : - –- -