ಏಪ್ರಿಲ್ 3 ರಂದು ಮಂಡ್ಯದಲ್ಲೇ ಸಭೆ ಮಾಡಿ ನನ್ನ ನಿರ್ಧಾರ ಪ್ರಕಟ- ಸುಮಲತಾ ಅಂಬರೀಶ್. ಬೆಂಗಳೂರು,ಮಾರ್ಚ್,30, 2024 (..):ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳ ಜೊತೆ ಚರ್ಚಿಸಿ ತನ್ನ ನಿರ್ಧಾರವನ್ನ ಇಂದು ಪ್ರಕಟಿಸುವುದಾಗಿ ತಿಳಿಸಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಇದೀಗ ಏಪ್ರಿಲ್ 3ಕ್ಕೆ ತಮ್ಮ ನಿಲುವು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇಂದು ಬೆಂಗಳೂರಿನ ಜೆ.ಪಿ ನಗರದ ನಿವಾಸದ ಬಳಿಗೆ ಆಗಮಿಸಿದ್ದ ನೂರಾರು ಬೆಂಬಲಿಗರು, ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ನಿಮ್ಮಿಂದ ನನ್ನ 5 ವರ್ಷಗಳ ರಾಜಕೀಯ ಜೀವನ ಪ್ರಾರಂಭವಾಗಿದೆ. ನಿಮ್ಮ ಅನಿಸಿಕೆ ಹಂಚಿಕೊಳ್ಳಲು ಇಲ್ಲಿಗೆ ಬಂದಿದ್ದೀರಾ. ಅಂಬರೀಶ್ ಜೊತೆ 30 ವರ್ಷ ಇದ್ದವರು ಇಲ್ಲಿ ಇದ್ದಾರೆ. ಇಲ್ಲಿಗೆ ಬಂದಿರುವ ನೀವೆ ನನಗೆ ಶಕ್ತಿ. ನನ್ನ ಜೊತೆ ಯಾವ ದೊಡ್ಡ ನಾಯಕರು ಇಲ್ಲ. ನೀವೇ ಎಲ್ಲಾ ನನಗೆ ಎಂದರು. ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ಕೊಡ್ತೀವಿ ನಿಲ್ಲಿ ಅಂದ್ರು. ಆದರೆ ನಾನು ಮಂಡ್ಯ ಬಿಡಲ್ಲ. ಏಪ್ರಿಲ್ 3 ರಂದು ಮಂಡ್ಯಕ್ಕೆ ಹೋಗಿ ಸಭೆ ಮಾಡುತ್ತೇನೆ. ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ನಿಮ್ಮನ್ನು ನೋಯಿಸುವ ಕೆಲಸ ಮಾಡಲ್ಲ. ನಿಮ್ಮ ನೋಯಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಲ್ಲ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಸುಮಲತಾ ಅಂಬರೀಶ್ ಹೇಳಿದರು. : , ,