ಕೊಡಗಿನಲ್ಲಿ ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿತ: ಅರ್ಚಕರು ಸೇರಿ 6 ಮಂದಿ ನಾಪತ್ತೆ… ಕೊಡಗು,ಆ,6,2020(..): ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಈ ನಡುವೆ ಮಳೆಯಿಂದಾಗಿ ಎರಡು ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದು ಅರ್ಚಕ ಸೇರಿ 6 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಲಕಾವೇರಿಯ ಪ್ರಧಾನ ಅರ್ಚಕರ ಮನೆಯ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದ ಪರಿಣಾಮ ಪ್ರಧಾನ ಅರ್ಚಕ ಸೇರಿದಂತೆ 6 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೊಡಗಿನಲ್ಲಿ ಎಡೆಬಿಡದೇ ಭಾರೀ ಮಳೆ ಸುರಿಯುತ್ತಿದ್ದು ಬ್ರಹ್ಮಗಿರಿ ಗುಡ್ಡ ಕುಸಿತಗೊಂಡಿದೆ. ಹೀಗಾಗಿ ತಲಕಾವೇರಿಯಲ್ಲಿದ್ದ ಅರ್ಚಕ ಕುಟುಂಬ ಕಾಣೆಯಾಗಿದ್ದಾರೆ. ತಲಕಾವೇರಿಯ ಪ್ರಧಾನ ಅರ್ಚಕ ಸೇರಿದಂತೆ ಅವರ ಪತ್ನಿ, ಅಡುಗೆ ಸಹಾಯಕ ಸೇರಿದಂತೆ ಆರು ಮಂದಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಇನ್ನು ಮಳೆ ಪ್ರವಾಹ ಭೀತಿ ಹಿನ್ನೆಲೆ ಮನೆ ಖಾಲಿ ಮಾಡುವಂತೆ ಜಿಲ್ಲಾಡಳಿತ ಅರ್ಚಕರ ಕುಟುಂಬಕ್ಕೆ ಸೂಚನೆ ನೀಡಿತ್ತು. ಆದರೆ ಭಾವನಾತ್ಮಕವಾಗಿ ಅರ್ಚಕ ಕುಟುಂಬದವರು ಮನೆ ಖಾಲಿ ಮಾಡಿರಲಿಲ್ಲ. ಗುಡ್ಡ ಕುಸಿತ ಹಿನ್ನೆಲೆ ಸುಮಾರು 2 ಕಿಲೋ ಮೀಟರ್ ವರೆಗೆ ಮನೆ ಜಾರಿಹೋಗಿದೆ ಎನ್ನಲಾಗಿದೆ. ಮಳೆಯಿಂದಾಗಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ‌ ನದಿಗಳು‌ ಉಕ್ಕಿ ಹರಿಯುತ್ತಿವೆ. ಮಳೆ, ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಡಗು ತತ್ತರಿಸಿದೆ. : - – –