ಹಮ್ ಆಪ್ ಕೆ ಹೈ ಕೌನ್” ಸಿನಿಮಾಗೆ 26 ವರ್ಷದ ಸಂಭ್ರಮ… ಮುಂಬೈ,ಆ,6,2020(..):ಬಾಲಿವುಡ್ ನಟಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ ರೊಮ್ಯಾಂಟಿಕ್ ಸಿನಿಮಾ “ಹಮ್ ಆಪ್ ಕೆ ಹೈ ಕೌನ್ 26ರ ಸಂಭ್ರಮ. ಹಮ್ ಆಪ್ ಕೆ ಹೈ ಕೌನ್ ತೆರೆಗೆ ಬಂದು 26 ವರ್ಷ ಕಳೆದಿದೆ. ಈ ಜನಪ್ರಿಯ ರೊಮ್ಯಾಂಟಿಕ್ ಸಿನಿಮಾ 1994 ರಿಲೀಸ್ ಆಗಿತ್ತು ಈ ಸಿನಿಮಾಗೆ 26 ವರ್ಷ ತುಂಬಿದೆ ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ. ಇಡೀ ಸಿನಿಮಾ ತಂಡದೊಂದಿಗೆ ಕಳೆದ ಮೋಜಿನ ನೆನಪುಗಳು ಮತ್ತು ಕಠಿಣ ಪರಿಶ್ರಮ ನೆನಪಾಗುತ್ತದೆ ಎಂದು ಮಾಧುರಿ ಅವರು ಟ್ವೀಟ್​ ಮಾಡಿದ್ದಾರೆ. ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಅವರೊಂದಿಗಿದ್ದ ಫೋಟೊ ಹಾಗೂ ಇತ್ತೀಚಿನ ಫೋಟೊವನ್ನು ಶೇರ್​ ಮಾಡಿದ್ದಾರೆ.