ಮೈಸೂರು: ಮನೆ ಗೋಡೆ ಕುಸಿದು ವೃದ್ಧ ಸಾವು… ಮೈಸೂರು,ಆ,6,2020(..): ಭಾರಿ ಮಳೆಗೆ ಮನೆ ಗೋಡೆ ಕುಸಿದು ವೃದ್ಧ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಹೆಚ್.ಡಿ ಕೋಟೆ ತಾಲ್ಲೂಕು ಮಾದಾಪುರದಲ್ಲಿ ಈ ಘಟನೆ ನಡೆದಿದೆ. ಶಿವನಂಜಯ್ಯ (80) ಮೃತಪಟ್ಟವರು. ಮಳೆಯ ಅವಾಂತರದಿಂದ ಮೈಸೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಮಳೆಯಿಂದಾಗಿ ಗೋಡೆ ಕುಸಿದು ಅವಶೇಷಗಳಡಿ ಸಿಲುಕಿ ಶಿವನಂಜಯ್ಯ ಮೃತಪಟ್ಟಿದ್ದಾರೆ. : - –- -