ನಾಳೆ ರಾಮಮಂದಿರ ಭೂಮಿಪೂಜೆ ಹಿನ್ನೆಲೆ: ಮನೆ ಮನೆಗೆ ತೆರಳಿ ಶ್ರೀರಾಮ‌ ಭಾವಚಿತ್ರ, ಹಣತೆ ವಿತರಣೆ… ಮೈಸೂರು,ಆ,4,2020(..): ನಾಳೆ ಅಯೋಧ್ಯೆಯಲ್ಲಿ ಶ್ರೀರಾಮ‌ ದೇಗುಲದ ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ಮೋದಿ ಶಿಲಾನ್ಯಾಸ ಕಾರ್ಯ ನೆರವೇರಿಸಲಿದ್ದಾರೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರೀರಾಮ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದ್ದು ರಾಮನಾಮ ಸ್ಮರಿಸುತ್ತಾ ನಗರದಲ್ಲಿ ಮನೆ ಮನೆಗೆ ತೆರಳಿ ಭಾವಚಿತ್ರ, ಹಣತೆ ವಿತರಣೆ ಮಾಡಿದರು. ಭೂಮಿಪೂಜೆ ಕಾರ್ಯ ಹಾಗೂ ದೇಗುಲ ನಿರ್ಮಾಣ ಸುಸೂತ್ರವಾಗಿ ನಡೆಯಲೆಂದು ಹಾರೈಕೆ ಮಾಡಿದರು. ಹಾಗೆಯೇ ದೇಗುಲ ನಿರ್ಮಾಣ ಸಂಪೂರ್ಣವಾಗುವರೆಗೆ ಹಣತೆ ಹಚ್ಚುವಂತೆ ನಿವಾಸಿಗಳಿಗೆ ರಾಮಭಕ್ತರು ಮನವಿ ಮಾಡಿದರು. : - ---