ಮೈಸೂರಿನ ವಾಣಿವಿಲಾಸ ನೀರು ಸರಬರಾಜು ಕಚೇರಿ ಸೀಲ್ ಡೌನ್… ಮೈಸೂರು,ಆ,4,2020(..): ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ, ಮೈಸೂರಿನ ಯಾದವಗಿರಿಯಲ್ಲಿರುವ ವಾಣಿವಿಲಾಸ ನೀರು ಸರಬರಾಜು ಕಛೇರಿಯನ್ನ ಸೀಲ್ ಡೌನ್ ಮಾಡಲಾಗಿದೆ. ವಾಣಿ ವಿಲಾಸ ನೀರು ಸರಬರಾಜು ಕಚೇರಿಯ ಓರ್ವ ಇಂಜಿನಿಯರ್ ಹಾಗೂ ಕಛೇರಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು ಮುಂಜಾಗ್ರತಾ ಕ್ರಮವಾಗಿ ಕಛೇರಿ ಸೀಲ್ ಡೌನ್ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಕಚೇರಿಯ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿ ಎರಡು ದಿನಗಳ ಕಾಲ ಸೀಲ್‌ಡೌನ್ ಮಾಡಿದೆ. ಸೀಲ್‌ಡೌನ್ ಆಗಿದ್ದರೂ ನೀರು ಸರಬರಾಜು ಎಂದಿನಂತೆ ನಡೆಯಲಿದೆ. ಸಾರ್ವಜನಿಕರಿಗೆ ಅತಿ ಅವಶ್ಯಕವಿದ್ದರಷ್ಟೇ ಕಛೇರಿಗೆ ಭೇಟಿ ನೀಡುವಂತೆ ಮನವಿ ಮಾಡಲಾಗಿದೆ. : - - - -