ಹಾಸನ ಜಿಲ್ಲೆಯಲ್ಲಿ ಇಂದು 131 ಮಂದಿಗೆ ಕೊರೋನಾ ಸೋಂಕು ದೃಢ: ಐವರು ಸಾವು… ಹಾಸನ,ಆ,3,2020(..): ಹಾಸನ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು 131 ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಸನ 70, ಅರಕಲಗೂಡು 20, ಹೊಳೇನರಸೀಪುರ 15, ಬೇಲೂರು 5 ಮಂದಿಗೆ, ಸಕಲೇಶಪುರದಲ್ಲಿ ಓರ್ವ ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 2548 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 1057 ಮಂದಿ ಸೋಂಕಿತರು ಗುಣಮುಖರಾಗಿದ್ದು 1421 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಕೊರೋನಾ ಸೋಂಕಿನಿಂದ ಇಂದು ಐವರು ಮೃತಪಟ್ಟಿದ್ದು ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ ಜಿಲ್ಲೆಯಲ್ಲಿ 70ಕ್ಕೆ ತಲುಪಿದೆ. ನಿನ್ನೆ ಹಾಸನ ಜಿಲ್ಲೆಯಲ್ಲಿ 142 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. : - 131 - –-