ಹಿಟ್ ಅಂಡ್ ರನ್ ಗೆ ಮಾವ, ಅಳಿಯ ಬಲಿ. ಹಾಸನ, ಮಾರ್ಚ್, 30,2024 (..):ಪಂಚರ್ ಆಗಿದ್ದ ಕಾರಿನ ಟೈರ್ ಬದಲಿಸುವಾಗ ಹಿಟ್ ಅಂಡ್ ರನ್ ಗೆ ಮಾವ ಮತ್ತು ಅಳಿಯ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶೆಟ್ಟಹಳ್ಳಿ ಬೈಪಾಸ್ ನಲ್ಲಿ ಈ ಘಟನೆ ನಡೆದಿದೆ. ಬೇಲೂರು ತಾಲೂಕಿನ ದೇವಿಹಳ್ಳಿ ನಿವಾಸಿ ಜವರಯ್ಯ (65) ಹಾಗೂ ಅರಸಿಕೆರೆ ತಾಲೂಕಿನ ನಾಗೇನಹಳ್ಳಿ ನಿವಾಸಿ ಮಧು (35) ಮೃತಪಟ್ಟವರು. ಮಾವ ಜವರಯ್ಯ ಹಾಗೂ ಪತ್ನಿ ಜೊತೆ ಮಧು ಬೆಂಗಳೂರಿನಿಂದ ಆಗಮಿಸುತ್ತಿದ್ದರು. ಈ ವೇಳೆ ಕರಿನ ಟೈರ್ ಪಂಚರ್ ಆಗಿದ್ದು ಟೈರ್ ಬದಲಿಸುವ ವೇಳೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದು ಮಾವ ಜವರಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಮಧು ಅವರ ಪತ್ನಿಗೆ ಗಾಯಗಳಾಗಿದ್ದು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ. : , ,