ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಿಗುವ ಸೌಲಭ್ಯ ತಮಗೂ ಸಿಗುವಂತೆ ಆಗ್ರಹ: ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್ ಗಳಿಂದ ಪ್ರತಿಭಟನೆ… ಬೆಂಗಳೂರು,ಅ,1,2020(..): ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಿಗುವ ಸೌಲಭ್ಯ ತಮಗೂ ಸಿಗುವಂತೆ ಆಗ್ರಹಿಸಿ ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್ ಗಳು ಪ್ರತಿಭಟನೆ ನಡೆಸಿದ್ದಾರೆ. ಬೌರಿಂಗ್ ಆಸ್ಪತ್ರೆಯ ಎದುರು ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್ ಗಳು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ವಿವಿಧ ಕಡೆಗಳಲ್ಲಿ ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್ ಗಳು ಪ್ರತಿಭಟನೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಿಗುವ ಸೌಲಭ್ಯ ತಮಗೂ ಸಿಗಬೇಕು. ನೂತನ ಪಿಂಚಿಣಿ ಯೋಜನೆ ಜಾರಿ ಮಾಡಬೇಕು. ಶೇ.50ರಷ್ಟು ಹೆಚ್ಚುವರಿ ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೇ ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ಮಾಡುವುದಾಗಿ ಸ್ಟಾಫ್ ನರ್ಸ್ ಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. : - – - -