ಕನ್ನಡ ಸೇರಿದಂತೆ 9 ಭಾಷೆಗಳಲ್ಲಿ ‘ಥ್ರಿಲ್ಲರ್’ ಟ್ರೇಲರ್ ರಿಲೀಸ್ ಮಾಡಿದ ಆರ್​ಜಿವಿ ಮುಂಬೈ, ಜುಲೈ 31, 2020 (..):ರಾಮ್​ ಗೋಪಾಲ್​ ವರ್ಮಾ ಅವರ ಥ್ರಿಲ್ಲರ್​ ಚಿತ್ರದ ಟ್ರೇಲರ್​ ರಿಲೀಸ್ ಆಗಿದೆ. ಕನ್ನಡ, ತೆಲುಗು, ಸೇರಿದಂತೆ 9 ಭಾಷೆಗಳಲ್ಲಿ ಇದನ್ನು ಬಿಡುಗಡೆ ಮಾಡಿರುವುದು ವಿಶೇಷ. ನಟಿ ಅಪ್ಸರಾ. ಮತ್ತೆ ಹಾಟ್​ ಫೋಟೋಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿರುವ ಚಿತ್ರದ ಟ್ರೇಲರ್​ ತುಂಬಾ ನಾಯಕಿ ಅಪ್ಸರಾ ರಾಣಿಯ ಗ್ಲಾಮರ್​ ತುಂಬಿಕೊಂಡಿದೆ. ಕ್ಯಾಮೆರಾ ಕಣ್ಣು ನಾಯಕಿಯ ಪ್ರತಿ ಚಟುವಟಿಕೆಯನ್ನೂ ಸೆರೆ ಹಿಡಿದಿದೆ. ಥ್ರಿಲ್ಲರ್​ ಸಿನಿಮಾದ ಟ್ರೇಲರ್​ ಅನ್ನು ಒಂದೇ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಕಡಿಮೆ ಬಜೆಟ್​ನಲ್ಲಿ ಆರ್​ಜಿವಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.