ಸ್ಯಾನಿಟೈಸರ್ ಕುಡಿದು 8 ಮಂದಿ ಸಾವು… ಆಂಧ್ರಪ್ರದೇಶ,ಜು,31,2020(..): ಸ್ಯಾನಿಟೈಸರ್ ಕುಡಿದ 8 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡುವಿನಲ್ಲಿ ಈ ಘಟನೆ ನಡೆದಿದೆ. 8 ಮಂದಿ ಮದ್ಯ ಸಿಗದಿದ್ದಕ್ಕೆ ಸ್ಯಾನಿಟೈಸರ್ ಕುಡಿದಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಐವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಕುರಿತು ಪ್ರಕಾಶಂ ಜಿಲ್ಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. : 8 - -