ಕಳೆದ 15 ದಿನದ ಹಿಂದೆ ಬಂದು ಕಾಂಗ್ರೆಸ್ ಗೆ ಸೇರಿಸ್ಕೊಳ್ಳಿ ಅಂತಾ ಕಾಲು ಹಿಡಿದಿದ್ದ- ಸಿಪಿ ಯೋಗಶ್ವರ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಡಿ.ಕೆ ಶಿವಕುಮಾರ್.. ಬೆಂಗಳೂರು,ಜು,30,2020(..): ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ಹೆಚ್.ಡಿಕೆಗೆ ಡಿಕೆ ಬ್ರದರ್ಸ್ ತೊಂದರೆ ಕೊಡುತ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಸಿ.ಪಿ ಯೋಗೇಹೇಶ್ವರ್ ಕಳೆದ 15 ದಿನಗಳ ಹಿಂದೆ ಬಂದು ನನ್ನ ಕಾಲಿಗೆ ಬಿದ್ದಿದ್ದ. ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪರನ್ನ ಕೆಳಗೆ ಇಳಿಸುತ್ತಾರೆ. ನನ್ನನ್ನ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕೇಳಿದ್ದ.ನಾನೇ ಹೋಗ್ಲಿ ಪಾಪ ಅಂತ ‘ ನೀನು ಬಿಜೆಪಿಯಲ್ಲೇ ಇರು. ನಿನ್​ ಪಾರ್ಟಿಗೆ ಲಾಯಲ್​ ಆಗಿರು’ ಎಂದು ಬುದ್ದಿ ಹೇಳಿ ಕಳಿಸಿದ್ದೆ ಎಂದು ಸಿ.ಪಿ.ಯೋಗೇಶ್ವರ್​ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ವಾಗ್ದಾಳಿ ನಡೆಸಿದರು. ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, 15 ದಿನದ ಹಿಂದೆ ನನ್ನನ್ನು ಭೇಟಿ ಮಾಡಿದ್ದ ಯೋಗೇಶ್ವರ್​, ಯಡಿಯೂರಪ್ಪ ನನ್ನನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್​ಗೆ ಬರುವೆ ಎಂದು ಹೇಳಿದ್ದ. ಈಗ ಯಾಕೆ ಹೀಗೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಯೋಗೇಶ್ವರ್ ಏನು ಮೆಂಟಲಾ..? ಎಂದು ಕಿಡಿಕಾರಿದರು. ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್​ಗೆ ನಾಮನಿರ್ದೇಶನ ಆಗುತ್ತಿದ್ದಂತೆ ಡಿಕೆಶಿ ಮತ್ತು ಎಚ್​ಡಿಕೆ ವಿರುದ್ಧ ವಾಕ್ಸಮರ ನಡೆಸಿದ್ದರು. ಡಿಕೆಶಿ ಮತ್ತು ಎಚ್​ಡಿಕೆ ಇಬ್ಬರೂ ನಿವೃತ್ತ ಕುದುರೆಗಳು ಎಂದು ಕಟುವಾಗಿ ಟೀಕಿಸಿದ್ದರು. ಇದೀಗ ಡಿ.ಕೆ. ಶಿವಕುಮಾರ್​ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು​ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದ್ದರು. : - - -- -