ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ‘ಅಧೀರ’ನ ಅಸಲಿತನದ ಚರ್ಚೆ ಬೆಂಗಳೂರು, ಜುಲೈ 30, 2020 (..):ಕೆಜಿಎಫ್ 2ನಲ್ಲಿ ಸಂಜಯ್ ದತ್ ಪೋಸ್ಟರ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದು ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪೋಸ್ಟರ್ ಸೇರಿದಂತೆ ಹಾಲಿವುಡ್ ಚಿತ್ರಗಳ ನಕಲು ಎಂದು ಕೆಲವರು ದೂರಿದ್ದಾರೆ. ಅಂದಹಾಗೆ ಸಂಜಯ್ ದತ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಅಧೀರನ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್ ಮಾಡಲಾಗಿತ್ತು. ‘ವೈಕಿಂಗ್ಸ್‌’ ಕ್ರೂರ ಮಾರ್ಗದಿಂದ ಸ್ಫೂರ್ತಿ ಪಡೆದ ಅಧೀರ ಅಂತ ಬರೆದು ನಿರ್ದೇಶಕ ಪ್ರಶಾಂತ್​ ನೀಲ್​ ಅಧಿರ ಫಸ್ಟ್​ ಲುಕ್​ ಪೋಸ್ಟರ್​ ಶೇರ್​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ವೈಕಿಂಗ್ಸ್​​​ ಪೋಸ್ಟರ್​ ಜೊತೆಗೆ ಅಧೀರ ಪೋಸ್ಟರ್​​ನ ಕಂಪೇರ್​ ಮಾಡಿ ಕಾಪಿ ಅಂತ ಹೇಳಿದ್ದಾರೆ.