ಕೇಂದ್ರದಿಂದ ಅನ್ ಲಾಕ್ ಮಾರ್ಗಸೂಚಿ ರಿಲೀಸ್: ಫಿಟ್ನೆಸ್ ಪ್ರಿಯರಿಗೆ ಗುಡ್ ನ್ಯೂಸ್… ಬೆಂಗಳೂರು,ಜು,30,2020(..): ಕೇಂದ್ರ ಸರ್ಕಾರ ಅನ್ ಲಾಕ್ 3ರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಈ ಬಾರಿ ಫಿಟ್ನೆಸ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಕೊನೆಗೂ ಜಿಮ್ ಒಪನ್ ಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಆಗಸ್ಟ್ 5 ರಿಂದ ದೇಶಾದ್ಯಂತ ಜಿಮ್ ಪುನರಾರಂಭಕ್ಕೆ ಅಲ್ ಲಾಕ್ 3.0ರಲ್ಲಿ ಅನುಮತಿ ನೀಡಿದೆ. ಹೀಗಾಗಿ ಆಗಸ್ಟ್ 5 ರಿಂದ ನಗರದ ಎಲ್ಲಾ ಜಿಮ್ ಗಳು ಓಪನ್ ಆಗಲಿವೆ. ಆಗಸ್ಟ್ 1 ರಿಂದ ನೈಟ್ ಕರ್ಫ್ಯೂ ಇರೋದಿಲ್ಲ. ಜಿಮ್ ಜೊತೆಗೆ ಯೋಗ ಕೇಂದ್ರಗಳಿಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇನ್ನುಳಿದಂತೆ ಮೆಟ್ರೊ, ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್‌ಪೂಲ್‍ಗೆ ಅನುಮತಿ ನೀಡಿಲ್ಲ. ಆಗಸ್ಟ್ ಅಂತ್ಯದವರೆಗೆ ಶಾಲಾ ಕಾಲೇಜುಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಈಗಾಗಲೇ ಎರಡು ಹಂತಗಳಲ್ಲಿ ಕೇಂದ್ರ ಸರ್ಕಾರ ನಿರ್ಬಂಧ ಸಡಿಲಿಕೆ ಮಾಡಿತ್ತು. : - – - –